
ಪ್ರೊ ಕಬಡ್ಡಿ ಪಂದ್ಯಗಳು ಒಂದಕ್ಕಿಂತ ಒಂದು ರೋಚಕತೆಯಿಂದ ಸಾಗುತ್ತಿದ್ದು, ನಾಳೆ ಪ್ರೊ ಕಬಡ್ಡಿಯ ಒಂದು ಸಾವಿರದ ಪಂದ್ಯ ನಡೆಯಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಕಬಡ್ಡಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಪ್ರೊ ಕಬಡ್ಡಿ ಲೀಗ್ ಭಾರತ ಮಾತ್ರವಲ್ಲದೆ ಬೇರೆ ಬೇರೆ ದೇಶಗಳಲ್ಲಿ ಸಕ್ಕತ್ ಸೌಂಡ್ ಮಾಡುತ್ತಿದೆ.
ಇಂದು ಪ್ರೊ ಕಬಡ್ಡಿಯ 71ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್ ಮುಖಾಮುಖಿಯಾಗುತ್ತಿವೆ. ಸತತ ಸೋಲಿನಿಂದ ಅಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ತಮಿಳ್ ತಲೈವಾಸ್ ತಂಡಕ್ಕೆ ಹರಿಯಾಣ ಸ್ಟೀಲರ್ಸ್ ಎದುರು ಗೆಲ್ಲಲೇ ಬೇಕಾದ ಅನಿವಾರ್ಯವಿದ್ದು, ಯುವ ರೈಡರ್ ನರೇಂದರ್ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಮತ್ತು ಪಟ್ನಾ ಪೈರೇಟ್ಸ್ ಸೆಣಸಾಡಲಿವೆ.