
ಪ್ರೊ ಕಬಡ್ಡಿ ಲೀಗ್ ಇನ್ನೇನು ಕೊನೆಯ ಹಂತ ತಲುಪಿದ್ದು, ತೆಲುಗು ಟೈಟಾನ್ಸ್ ಹೊರತುಪಡಿಸಿ ಇನ್ನುಳಿದ ತಂಡಗಳು ಸೆಮಿ ಫೈನಲ್ ಪ್ರವೇಶಿಸಲು ಜಿದ್ದಾಜಿದ್ದಿ ಹೋರಾಟ ನಡೆಸುತ್ತಿವೆ. ಹೈದರಾಬಾದ್ ನಲ್ಲಿದ್ದ ಪ್ರೊ ಕಬಡ್ಡಿ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಜನವರಿ 31ರವರೆಗೆ ಪಟ್ನಾದಲ್ಲಿ ಕಬಡ್ಡಿ ಪಂದ್ಯಗಳು ನಡೆಯಲಿವೆ.
ಮೊದಲ ಪಂದ್ಯದಲ್ಲೇ ಪಟ್ನಾ ಪೈರೇಟ್ಸ್ ತನ್ನ ಓಂ ಗ್ರೌಂಡ್ ನಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಜೊತೆ ಸೆಣಸಾಡಲಿದೆ, ಬಲಿಷ್ಠ ರೈಡರ್ಗಳನ್ನು ಹೊಂದಿರುವ ಪಟ್ನಾ ಪೈರೇಟ್ಸ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದು, ಇಂದು ಮೇಲೆರುವ ನಿರೀಕ್ಷೆಯಲ್ಲಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ.