alex Certify ಪ್ರೊ ಕಬಡ್ಡಿ; ಮೊದಲ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಹರಿಯಾಣ ಸ್ಟೀಲರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೊ ಕಬಡ್ಡಿ; ಮೊದಲ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಹರಿಯಾಣ ಸ್ಟೀಲರ್ಸ್

ನಿನ್ನೆ ನಡೆದ ಪ್ರೊ ಕಬಡ್ಡಿ ಫೈನಲ್ ನಲ್ಲಿ ಹರಿಯಾಣ ಸ್ಟೀಲರ್ ತಂಡ ಬಲಿಷ್ಠ ಪಟ್ನಾ ಪೈರೇಟ್ಸ್ ತಂಡವನ್ನು  ಬಗ್ಗು ಬಡಿವ ಮೂಲಕ ಪ್ರೊ ಕಬಡ್ಡಿ ಇತಿಹಾಸದಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿದೆ. ತನ್ನ ಮೊದಲ ಟ್ರೋಫಿಯನ್ನು ಎತ್ತಿ ಹಿಡಿದಿದೆ, ಪಟ್ನಾ ಪೈರೇಟ್ಸ್ ತಂಡ ಕೇವಲ ಒಂಬತ್ತು ಅಂಕಗಳ ಅಂತರದಿಂದ ಪದ್ಯವನ್ನು ಕೈ ಚೆಲ್ಲಿದ್ದು ಅವರ ಅಭಿಮಾನಿಗಳಲ್ಲಿ ನಿರಾಸೆ ಮಾಡಿದೆ.

ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಾಗೇವಾಡಿಯಲ್ಲಿ ನಡೆದ ಈ ಫೈನಲ್ ಪಂದ್ಯ ಅಂದುಕೊಂಡಂತೆ ರೋಚಕತೆಯಿಂದ ಸಾಗಿದ್ದು ಬಂದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಮೊಹಮ್ಮದ್ ರೆಜಾ ಶಾದ್ಲು ಹಾಗೂ ಶಿವಂ ಪತಾರೆ ಅವರ ಅಬ್ಬರಕ್ಕೆ ಪಟ್ನಾ ಪೈರೇಟ್ಸ್ ತಂಡಕ್ಕೆ ಉತ್ತರವೇ ಸಿಗದಂತಾಗಿದೆ. ಪ್ರತಿ ಪಂದ್ಯಗಳಲ್ಲಿ ತಮ್ಮ ಆಟಗಾರರಿಗೆ ಸಲಹೆ ನೀಡಲು ಕೋರ್ಟ್ ಬಳಿ ಬಂದು ವಾರ್ನಿಂಗ್ ಪಡೆಯುತ್ತಿದ್ದ ಕೋಚ್ ಮನಪ್ರೀತ್ ಸಿಂಗ್ ಅವರಲ್ಲಿ ಸಂಭ್ರಮ ಮನೆ ಮಾಡಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...