
ಪ್ರೊ ಕಬಡ್ಡಿ ಪಂದ್ಯಗಳು ಭರ್ಜರಿ ಮನರಂಜನೆ ನೀಡುತ್ತಿದ್ದು, ಮುಂಬೈನಲ್ಲಿದ್ದ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿವೆ. ಇಂದಿನಿಂದ ಜನವರಿ 17ರವರೆಗೆ ಜೈಪುರ್ ನಲ್ಲಿ ಕಬಡ್ಡಿ ಪಂದ್ಯ ನಡೆಯಲಿವೆ. ಕಳೆದ ಸೀಸನ್ ನ ಚಾಂಪಿಯನ್ ಗಳಾಗಿದ್ದ ಅಭಿಷೇಕ್ ಬಚ್ಚನ್ ಮಾಲಿಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ಈ ಬಾರಿಯೂ ಒಂದರ ಮೇಲೊಂದು ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ.
ಇಂದು ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ತೆಲುಗು ಟೈಟನ್ಸ್ ಜೊತೆ ಸೆಣಸಾಡಲಿದ್ದು, ಅಭಿಷೇಕ್ ಬಚ್ಚನ್ ತಮ್ಮ ತಂಡಕ್ಕೆ ಸಪೋರ್ಟ್ ಮಾಡಲು ಆಗಮಿಸಲಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಪುಣೆರಿ ಪಲ್ಟಾನ್ ಹಾಗೂ ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಲಿವೆ.