
ಫೆಬ್ರವರಿ 26 ರಿಂದ ಪ್ರೊ ಕಬಡ್ಡಿಯ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದ್ದು, ಕಳೆದ ಬಾರಿ ಚಾಂಪಿಯನ್ ಆಗಿದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಈಗಾಗಲೇ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದೆ. ಪಾಟ್ನಾದಲ್ಲಿನ ಕಬಡ್ಡಿ ಪಂದ್ಯಗಳು ಮೊನ್ನೆಗೆ ಮುಕ್ತಾಯವಾಗಿದ್ದು, ಇಂದಿನಿಂದ ಫೆಬ್ರವರಿ 7 ರವರಿಗೆ ದೆಹಲಿಯಲ್ಲಿ ಕಬಡ್ಡಿ ಪಂದ್ಯ ನಡೆಯಲಿವೆ.
ಇಂದು ಪ್ರೊ ಕಬಡ್ಡಿಯ 100ನೇ ಪಂದ್ಯ ನಡೆಯುತ್ತಿದ್ದು, ದಬಾಂಗ್ ಡೆಲ್ಲಿ ತನ್ನ ಹೋಂ ಗ್ರೌಂಡ್ ನಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಐದು ಹಾಗೂ ಆರನೇ ಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ಮತ್ತು ಗುಜರಾತ್ ಜೈಂಟ್ಸ್ ಸೆಣಸಾಡಲಿದ್ದು, ನಾಲ್ಕನೇ ಸ್ಥಾನಕ್ಕೆ ಜಿಗಿಯಲು ಎರಡು ತಂಡಗಳು ಇಂದು ಜಿದ್ದಾಜಿದ್ದಿ ಹೋರಾಟ ನಡೆಸಲಿವೆ.