
ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಮತ್ತು ತಮಿಳ್ ತಲೈವಾಸ್ ಇಂದು ಮುಖಾಮುಖಿಯಾಗಲಿವೆ.
ಎರಡು ತಂಡಗಳಿಗೂ ಈ ಪಂದ್ಯ ತುಂಬಾ ಮುಖ್ಯವಾಗಿದ್ದು ಯಾವ ತಂಡಕ್ಕೆ ವಿಜಯದ ಮಾಲೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಬೆಂಗಳೂರು ಬುಲ್ಸ್ ತಂಡದಲ್ಲಿ ರೈಡರ್ಗಳಿಂದ ಯಾವುದೇ ಉತ್ತಮ ಪ್ರದರ್ಶನ ದೊರೆಯದೆ ಇರುವುದು ದೊಡ್ಡ ಹೊಡೆತ ಕೊಟ್ಟಿದೆ. ಟ್ಯಾಕಲ್ಸ್ ಪಾಯಿಂಟ್ಗಳ ಮೂಲಕವೇ ಪಂದ್ಯವನ್ನು ಗೆಲ್ಲುತ್ತಿದ್ದಾರೆ.
ಎರಡು ತಂಡಗಳಲ್ಲೂ ಬಲಿಷ್ಠ ಡಿಫೆಂಡರ್ ಗಳಿದ್ದು, ಒಂದು ಒಳ್ಳೆಯ ರೋಮಾಂಚನಕಾರಿ ಪಂದ್ಯಕ್ಕೆ ಹೈದರಾಬಾದ್ ಸಜ್ಜಾಗಿದೆ. ಇದಾದ ಬಳಿಕ ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಪುಣೇರಿ ಪಲ್ಟನ್ ಮುಖಾಮುಖಿಯಾಗಲಿವೆ.