ಇತ್ತೀಚಿಗಷ್ಟೇ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆ ನಡೆದಿದ್ದು, ಬೆಂಗಳೂರು ಬುಲ್ಸ್ ತಂಡ ಹೊಸ ರೀತಿಯಲ್ಲೇ ಕಾಣುತ್ತಿದೆ. ಬಲಿಷ್ಠ ರೈಡರ್ಗಳಾದ ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್ ಹಾಗೂ ಅಜಿಂಕ್ಯ ಪವಾರ್ ಸೇರ್ಪಡೆಯಾಗಿದ್ದು, ಬೆಂಗಳೂರು ಬುಲ್ಸ್ ತಂಡಕ್ಕೆ ಆನೆ ಬಲ ಬಂದಂತಾಗಿದೆ ಇನ್ನೇನು ಕೆಲವೇ ದಿನಗಳಲ್ಲಿ ಪ್ರೊ ಕಬಡ್ಡಿ 11ನೇ ಆವೃತ್ತಿ ಆರಂಭವಾಗಲಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಈ ಬಾರಿಯ ಬೆಂಗಳೂರು ಬುಲ್ಸ್ ತಂಡ ಈ ರೀತಿ ಇದೆ;
ಪರ್ದೀಪ್ ನರ್ವಾಲ್, ಅಜಿಂಕ್ಯ ಪವಾರ್, ಸುಶೀಲ್, ಅಕ್ಷಿತ್, ಜೈ ಭಗವಾನ್, ಜತಿನ್, ಮಂಜಿತ್, ಪ್ರಮೋತ್, ಹಾಗೂ ಪಂಕಜ್ ರೈಡರ್ಗಳಾದರೆ, ಸೌರಬ್ ನಂದಾಲ್, ರೋಹಿತ್ ಕುಮಾರ್, ಆದಿತ್ಯ ಪವಾರ್, ಪರ್ಥೀಕ್, ಲಕ್ಕಿ ಕುಮಾರ್, ಡಿಫೆಂಡರ್ಸ್ ಗಳಾಗಿದ್ದಾರೆ. ಇನ್ನುಳಿದಂತೆ ನಿತಿನ್ ರಾವಲ್ ಮತ್ತು ಚಂದ್ರ ನಾಯಕ್ ಆಲ್ ರೌಂಡರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.