ನಿನ್ನೆಯ ಪ್ರತಿಷ್ಠೆಯ ಸಮರದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ ಬೆಂಗಳೂರು ಬುಲ್ಸ್ ಎದುರು ಜಯಭೇರಿಯಾಗಿದ್ದು, ಬೆಂಗಳೂರು ಬುಲ್ಸ್ ನ ಕಳಪೆ ಪ್ರದರ್ಶನ ಮುಂದುವರೆದಿದೆ. ಇಂದು ಪ್ರೊ ಕಬ್ಬಡಿಯ ಮೊದಲ ಪಂದ್ಯದಲ್ಲಿ ಟೇಬಲ್ ಟಾಪರ್ ಹರಿಯಾಣ ಸ್ಟೀಲರ್ಸ್ ಜೊತೆ ಹೋರಾಡಲು ಬೆಂಗಳೂರು ಬುಲ್ಸ್ ಸಜ್ಜಾಗಿದೆ.
ಬಲಿಷ್ಠ ಡಿಫೆಂಡರ್ ಗಳನ್ನು ಹೊಂದಿರುವ ಹರಿಯಾಣ ಸ್ಟೀಲರ್ಸ್ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದರೆ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ತನ್ನ ಅಭಿಮಾನಿಗಳಿಗೋಸ್ಕರ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ತವಕದಲ್ಲಿದೆ.
ಇದಾದ ಬಳಿಕ ಮತ್ತೊಂದು ಪದ್ಯದಲ್ಲಿ ಯು ಮುಂಬಾ ಮತ್ತು ತಮಿಳ್ ತಲೈವಾಸ್ ಮುಖಾಮುಖಿಯಾಗುತ್ತಿದ್ದು, ಉಭಯ ತಂಡಗಳಿಗೂ ಬಹು ಮುಖ್ಯವಾದ ಪಂದ್ಯವಾಗಿದೆ.