
ಬೆಂಗಳೂರು ಬುಲ್ಸ್ ತಂಡದಲ್ಲಿ ರೈಡರ್ಗಳ ಕೊರತೆ ಇದ್ದು, ಈ ಬಾರಿ ಸ್ಟಾರ್ ರೈಡರ್ ಗಳನ್ನು ಖರೀದಿಸುವ ಲೆಕ್ಕಾಚಾರದಲ್ಲಿದೆ. ಯುಪಿ ಯೋಧಾಸ್ ತಂಡದಲ್ಲಿದ್ದ ದಾಖಲೆಗಳ ಸರದಾರ ಡುಮ್ಕಿ ಕಿಂಗ್ ಪರ್ದೀಪ್ ನರ್ವಾಲ್ ಇತ್ತೀಚಿನ ದಿನಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿದ್ದು, ಬೇರೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಪವನ್ ಸೆಹ್ರಾವತ್ ಮತ್ತೊಮ್ಮೆ ತೆಲುಗು ಟೈಟನ್ಸ್ ನಲ್ಲೆ ಉಳಿಯಲಿದ್ದಾರ ಕಾದು ನೋಡಬೇಕಾಗಿದೆ. ಒಟ್ಟಾರೆ ಪ್ರೊ ಕಬಡ್ಡಿಯ 11ನೇ ಸೀಸನ್ ನ ಮನರಂಜನೆ ಪಡೆಯಲು ಕಬಡ್ಡಿ ಪ್ರೇಮಿಗಳು ಸಜ್ಜಾಗಿದ್ದಾರೆ.