ಉದಯಪುರ: ಕಾಂಗ್ರೆಸ್ ನಲ್ಲಿ ಮಹತ್ದದ ಬದಲಾವಣೆ ಬೆಳವಣಿಗಳ ನಡುವೆ ಪಕ್ಷದ ನಾಯಕ ಆಚಾರ್ಯ ಪ್ರಮೋದ್ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಅಧ್ಯಕ್ಷರಾಗಲಿ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಅವರು ಪಕ್ಷದ ಅತ್ಯಂತ ಜನಪ್ರಿಯ ಮುಖವಾಗಿದ್ದು, ರಾಹುಲ್ ಗಾಂಧಿ ಜವಾಬ್ದಾರಿಯನ್ನು ಸ್ವೀಕರಿಸಲು ಸಿದ್ಧರಿಲ್ಲದಿದ್ದರೆ ಪ್ರಿಯಾಂಕಾ ಅವರು ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮೂರು ದಿನಗಳ ‘ನವ ಸಂಕಲ್ಪ ಚಿಂತನ್ ಶಿವರ್’ ನಲ್ಲಿ ಕಾಂಗ್ರೆಸ್ ನಲ್ಲಿ ಸಾಂಸ್ಥಿಕ ಪುನಾರಚನೆ ಮತ್ತು ಸುಧಾರಣೆಗಳ ಕುರಿತು ಚರ್ಚೆಗಳ ಮಧ್ಯೆ ಈ ಹೇಳಿಕೆ ಬಂದಿದೆ,
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚರ್ಚೆ ಮತ್ತು ಬದಲಾವಣೆ ಕುರಿತು ಮಾತನಾಡಿದ್ದಾರೆ. ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಯುವ ಪೀಳಿಗೆಗೆ ಪಕ್ಷವನ್ನು ಮುಂದಿನಿಂದ ಮುನ್ನಡೆಸಲು ಅವಕಾಶ ಸಿಗಬೇಕು. 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬದಲಾವಣೆ ತರಲಾಗುವುದು ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಪಕ್ಷದ ಆಡಳಿತವನ್ನು ವಹಿಸಿಕೊಳ್ಳುವ ಸಮಯ ಬಂದಿದೆ. ಕೆಲವು ಕಾರಣಗಳಿಂದ ಅವರು ಪಾತ್ರವನ್ನು ಸ್ವೀಕರಿಸಲು ಸಿದ್ಧರಿಲ್ಲದಿದ್ದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಮುಂದೆ ಬಂದು ಪಕ್ಷವನ್ನು ಮುನ್ನಡೆಸಬೇಕು, ಏಕೆಂದರೆ ಅವರು ದೇಶದ ಅತ್ಯಂತ ಜನಪ್ರಿಯ ಮುಖ ಎಂದು ಪ್ರಮೋದ್ ಹೇಳಿದ್ದಾರೆ.