ನವದೆಹಲಿ: ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪುತ್ರ ರೈಹಾನ್ ವಾದ್ರಾ ಇದರಲ್ಲಿ ಸಾಧನೆ ಮಾಡಲು ಮುಂದಾಗಿದ್ದಾರೆ. ನವದೆಹಲಿಯ ಬಿಕನೇರ್ ಹೌಸ್ ನಲ್ಲಿ ತಾನು ಸೆರೆ ಹಿಡಿದಿರುವ ಚಿತ್ರಗಳನ್ನು ಜುಲೈ 11ರಿಂದ 17ರ ವರೆಗೆ ಪ್ರದರ್ಶನಕ್ಕಿಟ್ಟಿದ್ದಾರೆ.
ಇದನ್ನು ಖುದ್ದಾಗಿ ವೀಕ್ಷಿಸಲು ಪ್ರಿಯಾಂಕಾ ಗಾಂಧಿ ಕೂಡ ಆಗಮಿಸಿದ್ದರು. ಮಗನ ಸಾಧನೆಯನ್ನು ಕೊಂಡಾಡಿದ ಅವರು ರೈಹಾನ್ ಜತೆ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಾರ್ಕ್ ಪರ್ಸೆಪ್ಶನ್ ಎಂದು ಈ ಫೋಟೋಗ್ರಫಿ ಪ್ರದರ್ಶನಕ್ಕೆ ಹೆಸರಿಡಲಾಗಿದೆ.
ಸರ್ಕಾರಿ ನೌಕರರಿಗೆ ಖುಷಿ ಸುದ್ದಿ: ಶೇ.28ಕ್ಕೆ ಏರಿಕೆಯಾಯ್ತು ಡಿಎ
ತನ್ನ ಪುತ್ರ ತನ್ನದೇ ಹಾದಿ ಮೂಲಕ ಗುರಿ ತಲುಪಲು ಶ್ರಮ ಪಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ‘’ರೈಹಾನ್ ನ ಮೊದಲ ಡಾರ್ಕ್ ಪರ್ಸೆಪ್ಶನ್ ಎನ್ನುವ ಬೆಳಕು, ಬಯಲು, ಮತ್ತು ಸಮಯದ ಪ್ರದರ್ಶನವು ಸದ್ಯ ದೆಹಲಿಯ ಬಿಕನೇರ್ ಹೌಸ್ ನಲ್ಲಿ ನಡೆಯುತ್ತಿದೆ’’ ಎಂದು ಬರೆದಿರುವ ಪ್ರಿಯಾಂಕಾ ಫೋಟೋ ಶೇರ್ ಮಾಡಿದ್ದಾರೆ.
ಇನ್ನು ತಂದೆ ರಾಬರ್ಟ್ ವಾದ್ರಾ ಕೂಡ ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ತಾನು ಯಾವಾಗಲೂ ಪುತ್ರನ ಜೊತೆ ಬೆಂಬಲವಾಗಿ ಇರುವುದಾಗಿ ಹೇಳಿಕೊಂಡಿದ್ದಾರೆ.
https://www.instagram.com/p/CROMsiBHePB/?utm_source=ig_web_copy_link
https://www.instagram.com/p/CMzWOdhlnur/?utm_source=ig_web_copy_link
https://www.instagram.com/p/CM1ahNRlmpA/?utm_source=ig_web_copy_link