ಆತ್ಮಹತ್ಯೆಯ ವಿಷಯ ಹಾಸ್ಯ ಮಾಡುವಂಥದಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆತ್ಮಹತ್ಯಾ ಟಿಪ್ಪಣಿ ಕುರಿತು ತಮಾಷೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ
ಪ್ರಿಯಾಂಕಾ ವಾದ್ರಾ, ಪ್ರಧಾನಿ ಮತ್ತು ಅವರ ಹಾಸ್ಯಕ್ಕೆ ಮನಃಪೂರ್ವಕವಾಗಿ ನಗುತ್ತಿರುವವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಪಹಾಸ್ಯ ಮಾಡುವ ಬದಲು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಬುಧವಾರ ಸಮಾವೇಶದಲ್ಲಿ ಮಾತನಾಡುತ್ತಾ, ತಮ್ಮ ಮಗಳ ಡೆತ್ ನೋಟ್ ಓದುತ್ತಿದ್ದ ಪ್ರಾಧ್ಯಾಪಕರೊಬ್ಬರು ಇಷ್ಟು ವರ್ಷಗಳ ತಮ್ಮ ಪ್ರಯತ್ನದ ಹೊರತಾಗಿಯೂ ಕಾಗುಣಿತ ತಪ್ಪಾಗಿದೆ ಎಂದು ಟೀಕಿಸಿದರು ಎಂಬುದರ ಬಗ್ಗೆ ಹಾಸ್ಯವಾಗಿ ವಿವರಿಸಿದ್ದರು.
ಸಮಾವೇಶದಲ್ಲಿ ಮೋದಿಯವರ ಹಾಸ್ಯದ ವಿಡಿಯೋವನ್ನು ಟ್ಯಾಗ್ ಮಾಡಿರುವ ಪ್ರಿಯಾಂಕಾ ಗಾಂಧಿ, “ಖಿನ್ನತೆ ಮತ್ತು ಆತ್ಮಹತ್ಯೆ, ವಿಶೇಷವಾಗಿ ಯುವಕರಲ್ಲಿ ನಗುವ ವಿಷಯವಲ್ಲ. NCRB ಡೇಟಾ ಪ್ರಕಾರ, 164033 ಭಾರತೀಯರು 2021 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದು ಒಂದು ದುರಂತ, ತಮಾಷೆಯಲ್ಲ.” ಎಂದಿದ್ದಾರೆ.
“ಪ್ರಧಾನಿ ಮತ್ತು ಅವರ ಹಾಸ್ಯಕ್ಕೆ ಮನಃಪೂರ್ವಕವಾಗಿ ನಗುವವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಈ ಸೂಕ್ಷ್ಮವಲ್ಲದ, ಅಸ್ವಸ್ಥ ರೀತಿಯಲ್ಲಿ ಅಪಹಾಸ್ಯ ಮಾಡುವ ಬದಲು ಉತ್ತಮ ಶಿಕ್ಷಣ ಮತ್ತು ಜಾಗೃತಿ ಮೂಡಿಸಬೇಕು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಇದನ್ನು ಪ್ರಪಿಎಂ ಮೋದಿ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ವ್ಯವಹರಿಸುವ ‘ದಿ ಲೈವ್ ಲವ್ ಲಾಫ್’ ಫೌಂಡೇಶನ್ ಗೆ ಟ್ಯಾಗ್ ಮಾಡಿದ್ದಾರೆ.