
ಹೊಸವರ್ಷ ಎಲ್ಲರ ಪಾಲಿಗೂ ಅತ್ಯಂತ ಮೌಲ್ಯಯುತ ಕ್ಷಣ. ಕುಟುಂಬದವರು, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಹೊಸ ಗಳಿಗೆಯನ್ನ ಸ್ವಾಗತಿಸುವುದು ಪ್ರತಿಯೊಬ್ಬರ ಕನಸು.
ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಕೂಡ ತನ್ನ ಬ್ಯುಸಿ ಶೆಡ್ಯೂಲ್ ನಡುವೆ ಪತಿ ನಿಕ್ ಜೋನಾಸ್ ರವರೊಂದಿಗೆ ಹೊಸ ವರ್ಷದ ಪ್ರಯುಕ್ತವಾಗಿ ಲಾಂಗ್ ಟ್ರಿಪ್ ಗೆ ತೆರಳಿದ್ದಾರೆ. ಇವರಿಬ್ಬರ ರೊಮ್ಯಾಂಟಿಕ್ ವಿಹಾರದ ಫೋಟೊಗಳನ್ನ ಪ್ರಿಯಾಂಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕ ಹಂಚಿಕೊಂಡಿರುವ ಪ್ರವಾಸದ ಫೋಟೊಗಳು ಆಕೆಯ ಅಭಿಮಾನಿಗಳ ಮನಸ್ಸನ್ನ ಗೆದ್ದಿವೆ. ಪ್ರಿಯಾಂಕ ಶೇರ್ ಮಾಡಿರುವ ಫೋಟೊ ಡಂಪ್ ನಲ್ಲಿ ಅವರಿಬ್ಬರ ಸ್ನ್ಯಾಪ್‌ಶಾಟ್‌ಗಳು, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಿರುವುದನ್ನ ತೋರಿಸುತ್ತದೆ. ಮತ್ತೊಂದು ಫೋಟೊದಲ್ಲಿ ಗುಲಾಬಿ ಬಣ್ಣದ ಸಾದಾ ಮ್ಯಾಕ್ಸಿ ಡ್ರೆಸ್ ನಲ್ಲಿ ಪತಿಯೊಂದಿಗೆ ಫೋಟೊಗೆ ಪೋಸ್ ಕೊಟ್ಟಿರುವ ಪ್ರಿಯಾಂಕ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಬೆಚ್ಚಿಬೀಳಿಸುವಂತಿದೆ ಈ ವಿಡಿಯೋ: ದಲಿತ ಬಾಲಕಿಯನ್ನ ನಿರ್ದಯವಾಗಿ ಥಳಿಸಿದ ಉತ್ತರ ಪ್ರದೇಶದ ಕುಟುಂಬ
ನಮ್ಮೆಲ್ಲರಂತೆಯೇ, ಪ್ರಿಯಾಂಕಾ ಚೋಪ್ರಾ ಕೂಡ 2022 ಅನ್ನು ಸ್ವಾಗತಿಸುವ ಬಗ್ಗೆ ಉತ್ಸುಕರಾಗಿದ್ದರು. ಜನವರಿ 1ರಂದು ಲ್ಯಾವೆಂಡರ್ ಉಡುಪಿನಲ್ಲಿ ತೆಗೆದಿದ್ದ ಫೋಟೊ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಹೊಸವರ್ಷದ ಶುಭಾಶಯ ಕೋರಿದ್ದರು.