ತಮ್ಮ ಮೊದಲ ಆದ್ಯತೆ ಹಾಲಿವುಡ್ಡೋ, ಬಾಲಿವುಡ್ಡೋ ಎಂದು ಇನ್ಸ್ಟಾಗ್ರಾಂನಲ್ಲಿ ಕೇಳಿದ ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಸೇಫ್ ಆಗಿ ಆಡಿದ್ದಾರೆ ಪ್ರಿಯಾಂಕಾ ಚೋಪ್ರಾ.
’ಇಟ್ಸ್ ಟ್ರಿಕ್ಕಿ’ ಚಾಲೆಂಜ್ನಲ್ಲಿ ಭಾಗಿಯಾದ ಪ್ರಿಯಾಂಕಾ, ಈ ಟ್ರೆಂಡ್ ಮೂಲಕ ಜನರು ತಮ್ಮನ್ನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಈ ಪ್ರಶ್ನಾವಳಿ ವೇಳೆ ’ಪ್ರಮಾಣಕ್ಕಿಂತ’ ’ಗುಣಮಟ್ಟ’ ತಮ್ಮ ಆಯ್ಕೆ ಎಂದ ಪ್ರಿಯಾಂಕಾ, ’ಬಿಸಿ ಕಾಫಿ’ ಬದಲಿಗೆ ’ಐಸ್ ಟೀ’ ಆಯ್ದುಕೊಂಡಿದ್ದಾರೆ.
‘ಸಿಇಟಿ’ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
ತಾವು ಹೇರ್ ಡ್ರಯರ್ ಅಥವಾ ಮಾಸ್ಕ್ ಬಳಸುವುದಕ್ಕಿಂತ ’ಬ್ಲೋ ಡ್ರೈ’ ಹಾಗೂ ’ಏರ್ ಡ್ರೈಯರ್’ ಬಳಸುವುದಾಗಿ ತಿಳಿಸಿದ ಪ್ರಿಯಾಂಕಾ ಕೊನೆಗೆ ಕೇಳಲಾದ ಟ್ರಿಕ್ಕಿ ಪ್ರಶ್ನೆಯೊಂದಕ್ಕೆ ಬಲು ಜಾಣ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ.
’ಬಾಲಿವುಡ್’ ಹಾಗೂ ’ಹಾಲಿವುಡ್’ಗಳಲ್ಲಿ ತಮ್ಮ ಆಯ್ಕೆ ಯಾವುದು ಎಂದು ಕೇಳಿದಾಗ, ’ನಾನು ಈ ಆಟದಿಂದ ನಿರ್ಗಮಿಸುವೆ’ ಎಂದ ಪ್ರಿಯಾಂಕಾ, “ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸದೇ ಇದ್ದುಬಿಡುವುದು ಉತ್ತಮ” ಎಂದಿದ್ದಾರೆ.
ಪ್ರಶ್ನಾವಳಿಯ ವಿಡಿಯೋವನ್ನು ಪ್ರಿಯಾಂಕಾ ಇನ್ಸ್ಟಾಗ್ರಾಂನಲ್ಲಿರುವ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://www.youtube.com/watch?v=vM4LVh07_Yo