ಕಲಬುರಗಿ: ಶ್ರೀರಾಮುಲು ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಅವರು ಸಚಿವ ಸತೀಶ ಜಾರಕಿಹೊಳಿ ಪರ್ಯಾಯ ಅಲ್ಲ. ಸತೀಶ್ ನಮ್ಮ ಪಕ್ಷದ ನಾಯಕರು, ಅವರ ಸ್ಥಾನಮಾನವೇ ಬೇರೆ ಇದೆ. ಕಾಂಗ್ರೆಸ್ ಪಕ್ಷದಲ್ಲೇ ನಾಯಕತ್ವ ಬೆಳೆದಿದೆ ಎಂದು ಹೇಳಿದ್ದಾರೆ.
ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಇಬ್ಬರೂ ಸ್ನೇಹಿತರಾಗಿದ್ದರು. ಇವಾಗ ಗೇಟ್ ಕ್ಲೋಸ್ ಆಗಿದೆ ಅಂತ ಗೊತ್ತಾಗ್ತಿದೆ. ಎಲ್ಲೆಲ್ಲಿ ಓಪನ್ ಇತ್ತು, ಕ್ಲೋಸ್ ಎಲ್ಲಿ ಇತ್ತೆಂದು ನಮಗೆ ಗೊತ್ತಿಲ್ಲ. ಬಿಜೆಪಿ ಒಳಗಿನ ಬೆಳವಣಿಗೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯಲ್ಲಿ ಯಾರೂ ನಾಯಕರಾಗ್ತಾರೋ ನಮಗೆ ಸಂಬಂಧ ಇಲ್ಲ. ಆದರೆ ಬಿಜೆಪಿ ನಾಯಕರೇ ರಾಜ್ಯಾಧ್ಯಕ್ಷರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರ ಮಾಡಿದ್ದರು, ಬಿ.ಎಸ್.ವೈ. ಛೋಟಾ ಛೋಟಾ ಸಹಿ ಹಾಕಿದ್ರು ಎಂದು ವಿಜಯೇಂದ್ರ ವಿರುದ್ಧ ಆರೋಪಿಸಿದ್ದರು. ದುಬೈ ಮಾರಿಷಸ್ ನಲ್ಲೂ ಹಣ ಇಟ್ಟಿರುವುದಾಗಿ ಅವರೇ ಹೇಳಿದ್ದಾರೆ. ಅದರ ದಾಖಲೆ ಸರ್ಕಾರಕ್ಕೆ ಕೊಟ್ಟರೆ ಆ ಬಗ್ಗೆ ಸಹ ತನಿಖೆ ಮಾಡುತ್ತೇವೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ಏಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.