
ಕಲಬುರ್ಗಿ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಐಇ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಪೆನ್ ಡ್ರೈವ್ ಮಾಡಿದ್ಯಾರು? ಬಿಡುಗಡೆ ಮಾಡಿದ್ಯಾರು? ಎಲ್ಲಾ ಗೊತ್ತಿದೆ. ಮೈತ್ರಿ ಅಭ್ಯರ್ಥಿ ಬಿಡುಗಡೆ ಮಾಡಿದ್ದು ಅಂತಾ ಚಾಲಕ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಎಲ್ಲಾ ವಿಷಯ ಗೊತ್ತಿದ್ದರೂ ಬಿಜೆಪಿಯವರು ಪ್ರಜ್ವಲ್ ಗೆ ಟಿಕೆಟ್ ಕೊಟ್ರು. ರಾಜ್ಯ ಸರ್ಕಾರ ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು ಹೇಳಿದೆ. ಆದರೂ ಈವರೆಗೂ ಕೇಂದ್ರ ಸರ್ಕಾರ ಪಾಸ್ ಪೋರ್ಟ್ ರದ್ದು ಮಾಡಿಲ್ಲ. ಕೇಂದ್ರ ಸರ್ಕಾರ ಯಾಕೆ ಈ ಬಗ್ಗೆ ಕ್ರಮಕ್ಕೆ ಮುಂದಾಗುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ವಿಶ್ವಗುರುವಿಗೆ ಎಲ್ಲಾ ಗೊತ್ತಿರುತ್ತೆ ಅಂತಾರೆ, ಇದೇಕೆ ಗೊತ್ತಿರಲ್ಲ? ಹುಬ್ಬಳ್ಳಿ ಕೇಸ್ ಬಗ್ಗೆ ಇದ್ದ ಕಾಳಜಿ ಈ ಕೇಸ್ ಬಗ್ಗೆ ಯಾಕಿಲ್ಲ? ಎಂದು ಪ್ರಿಯಂಕ್ ಖರ್ಗೆ ಕೇಳಿದ್ದಾರೆ.
ಇದೇ ವೇಳೆ SIT ರಚನೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಖರ್ಗೆ, ಈ ಕೇಸ್ ನ್ನು ಎಸ್ಐಟಿ ಬಿಟ್ಟು ಎನ್ ಜಿಒಗೆ ಕೊಡುವುದಕ್ಕೆ ಆಗುತ್ತಾ? ಎಂದು ಗರಂ ಆದರು.