ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ 100 ಕೋಟಿ ಆಫರ್ ಮಾಡಿದ್ದರು ಎಂಬ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪಕ್ಕೆ ತಿರುಗೇಟು ನೀಡಿರುವ ಸಚಿವ ಪಿಯಾಂಕ್ ಖರ್ಗೆ, ನಮಗೆ ಚುನಾವಣೆ ಬಿಟ್ಟು ಬೇರೆ ಕೆಲಸವಿರಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, 100 ಕೋಟಿ ಆಫರ್ ಇತ್ತೆಂದು ಅಮಿತ್ ಶಾಗೆ ಹೇಳಬೇಕಿತ್ತು. 5 ಕೋಟಿ ಹಣ ಕೊಟ್ರು ಅಂದ್ರೆ ಎಷ್ಟು ಟೆಂಪೋಗ್ಳಲ್ಲಿ ತುಂಬಬೇಕು. ಈ ಹಣ ಎಷ್ಟು ಟೆಂಪೋಗಳಲ್ಲಿ ತುಂಬಬೇಕು ಎಂದು ಬಿಜೆಪಿಯವರಿಗೆ ಗೊತ್ತಿದೆ. ಹಣ ಕೊಟ್ಟಿರುವ ಬಗ್ಗೆ ವಿಡಿಯೋ ರಿಲೀಸ್ ಮಾಡಲಿ ಎಂದು ಹೇಳಿದ್ದಾರೆ.
ಪೊಲೀಸ್ ವ್ಯಾನ್ ನಲ್ಲಿ ಹೇಳಿಕೆ ಕೊಟ್ರೆ ಸಾಕ್ಷಿ ಎಂದು ಹೇಲಲು ಆಗುತ್ತಾ? ಏನು ಹೇಳಬೇಕು ಹೇಳಿ ಓಡಿ ಹೋದರೆ ಸಾಕ್ಷಿ ಅಂತಾ ಹೇಳಲು ಆಗುತ್ತಾ? ವಿಷಯ ಡೈವರ್ಟ್ ಮಾಡಲು ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕರಿದರು.
ಪ್ರಜ್ವಲ್ ರೇವಣ್ಣ ದೇಶದಲ್ಲಿಯೇ ಇದ್ದರೆ ನಾವು ಹೇಗಾದರೂ ಹುಡುಕಿ ತರಬಹುದಿತ್ತು. ಆದರೆ ವಿದೇಶದಲ್ಲಿದ್ದಾಗ ಕೇಂದ್ರ ಸರ್ಕಾರದ ಸಹಕಾರ ಬೇಕು ಎಂದು ಹೇಳಿದರು.