ಬೆಂಗಳೂರು: ಖರ್ಗೆ ಮಗ ಎಂಬ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಸಚಿವರಾಗಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿ.ವೈ.ವಿಜಯೇಂದ್ರ ಹೇಗೆ ರಾಜ್ಯಾಧ್ಯಕ್ಷರಾದರು? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಖರ್ಗೆ ಪುತ್ರ ಎಂಬ ಹೆಮ್ಮೆ ನನಗಿದೆ. ಆದರೆ ಬಿಜೆಪಿಯವರಿಗೆ ಯಾಕೆ ಅವರ ಅಪ್ಪಂದಿರ ಬಗ್ಗೆ ಗೌರವ ಇಲ್ಲ? ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಹೆಗಾದರು? ಆರ್.ಎಸ್.ಎಸ್ ನ ಎಷ್ಟು ಶಾಖೆ ಅಟೆಂಡ್ ಮಾಡಿ ಅಧ್ಯಕ್ಷರಾಗಿದ್ದಾರೆ? ಎಂದು ಕೇಳಿದ್ದಾರೆ.
ಬ್ಯಾಟ್ ಹಿಡಿಯಲು ಬಾರದವರನ್ನು ಐಸಿಸಿ ಅಧ್ಯಕ್ಷರನ್ನಾಗಿ ಮಾಡಿದರು. ಅವರಾದರೆ ಹಾಗೇ ನೇಮಕ ಮಡಬಹುದು. ನಾವು ಸೆಲೆಕ್ಟೆಡ್ ಆಗಬೇಕು. ಬಿಜೆಪಿಯವರು ಕುಉಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಕುಟುಂಬ ರಾಜಕರಣ ನಮ್ಮಲ್ಲಿದೆಯಾ? ಅವರಲ್ಲಿದೆಯಾ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ನನ್ನ ವಿರುದ್ಧ ಆರೋಪ ಮಾಡಲು ಸರಿಯಾದ ದಾಖಲೆ ಸಮೇತ ಆರೋಪ ಮಾಡಲಿ. ಸಚಿನ ಸಾವಿಗೂ ನನಗೂ ಸಂಬಂಧವಿಲ್ಲ. ಸಚಿನ ಡೆತ್ ನೋಟ್ ನಲ್ಲಿ ಎಲ್ಲಿಯೂ ನನ್ನ ಹೆಸರು ಉಲ್ಲೇಖವಿಲ್ಲ. ಬಿಜೆಪಿಯವರು ಸುಮ್ಮನೇ ನನ್ನ ಮೇಲೆ ಆರೋಪ ಮಾಡುತ್ತಾ, ವಾದ ಮಾಡುತ್ತಿದ್ದಾರೆ. ಬಿಜೆಪಿಯವರು ಸುಳ್ಳಿನ ಶೂರರು. ಛಲವಾದಿ ನಾರಾಯಣಸ್ವಾಮಿ, ಪಿ.ರಾಜೀವ್, ಸಿ.ಟಿ.ರವಿ ಬರಿ ಸುಳ್ಳು ಆರೋಪ ಮಾಡಿದ್ದಾರೆ. ಇವರ ವಿರುದ್ಧ ಈ ಹಿಂದೆಯೇ ಮಾನನಷ್ತ ಕೊಕದ್ದಮೆ ದಾಖಲಿಸಿದ್ದೆ. ಅವರು ಹಿಟ್ ಆಂಡ್ ರನ್ ಹೇಳಿಕೆ ನೀಡುವಲ್ಲಿ ಪಿಹೆಚ್ ಡಿ ಪಡೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.