“ಖಾಸಗೀಕರಣವು ಮೀಸಲಾತಿಗೆ ಅಂತ್ಯ ಹಾಡಲು ಇರುವ ದಾರಿಯಾಗಿದೆ,” ಎಂದು ಆಡಳಿತಾರೂಢ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿದ್ದಾರೆ.
ಪಕ್ಷದ ’ಲಡ್ಕೀ ಹೂಂ, ಲಡ್ ಸಕ್ತೀ ಹೂಂ’ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ, ಮಹಿಳೆಯರ ಸವಾಲುಗಳ ಬಗ್ಗೆ ಕಾಂಗ್ರೆಸ್ ವಿಚಾರವೆತ್ತಿದ ಮೇಲಷ್ಟೇ ಮಿಕ್ಕ ಪಕ್ಷಗಳು ಈ ಬಗ್ಗೆ ಮಾತನಾಡುತ್ತಿವೆ ಎಂದಿದ್ದಾರೆ.
ಮಡದಿಗೆ ಕಾವ್ಯಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ ಅಕ್ಷಯ್ ಕುಮಾರ್
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ 40%ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಹಂಚುವ ಮೂಲಕ ಈ ನಿಟ್ಟಿನಲ್ಲಿ ದೊಡ್ಡ ಅಭಿಯಾನಕ್ಕೆ ಚಾಲನೆ ನೀಡುತ್ತಿರುವುದಾಗಿ ಹೇಳಿದ ಪ್ರಿಯಾಂಕಾ, “ಮಹಿಳಾ ಮೀಸಲಾತಿ ಸಂಬಂಧ ಮಸೂದೆಯೊಂದನ್ನು ಸಂಸತ್ತಿನಲ್ಲಿ ಇದುವರೆಗೂ ಅನುಮೋದಿಸಿಲ್ಲ, ನಮ್ಮ ಈ ನಡೆಯು ಈ ನಿಟ್ಟಿನಲ್ಲಿ ಒಂದು ಪ್ರಯತ್ನವಾಗಿದೆ,” ಎಂದು ತಿಳಿಸಿದ್ದಾರೆ.
ಸರ್ಕಾರದ ದೊಡ್ಡ ಸಂಸ್ಥೆಗಳನ್ನೆಲ್ಲಾ ಪ್ರಧಾನ ಮಂತ್ರಿಯವರ ದೊಡ್ಡ ಸ್ನೇಹಿತರಿಗೆ ಮಾರಲಾಗಿದೆ ಎಂದ ಪ್ರಿಯಾಂಕಾ, “ನಿಮಗೆ ಈಗ ಸಿಗುತ್ತಿರುವ ಮೀಸಲಾತಿ ಖಾಸಗಿ ಕೆಲಸಗಳಲ್ಲಿ ಸಿಗಬಲ್ಲದೇ ? ಇದು ಮೀಸಲಾತಿಗೆ ಅಂತ್ಯ ಹಾಡಲು ಇರುವ ಮಾರ್ಗ, ಇದು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಒಳ್ಳೆಯದಲ್ಲ, ಏಕೆಂದರೆ ಬಹುತೇಕ ಸರ್ಕಾರಗಳು ಇಲ್ಲಿಂದಲೇ ರಚಿತವಾಗಿವೆ,’’ ಎಂದಿದ್ದಾರೆ.