
ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಯುವಕನ ಖಾಸಗಿ ಅಂಗ ಕತ್ತರಿಸಿದ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
ರಜೌರಿ ಗಾರ್ಡನ್ ನಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡ ಸ್ಥಿತಿಯಲ್ಲಿ ಸಿಕ್ಕಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಮೇರೆಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಯುವಕ, ಪ್ರೀತಿಸಿ ಮದುವೆಯಾಗಿದ್ದ. ಕೋಪಗೊಂಡ ಹುಡುಗಿ ಕುಟುಂಬಸ್ಥರು, ಹುಡುಗನ ಖಾಸಗಿ ಅಂಗ ಕತ್ತರಿಸಿದ್ದಾರೆ. ಯುವಕನನ್ನು ಅಪಹರಿಸಿ, ಥಳಿಸಿದ ನಂತರ ಆತನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ. ನಂತ್ರ ರಜೌರಿ ಗಾರ್ಡನ್ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ.
ಸದ್ಯ ಯುವಕನನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ಕಡೆಯವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪೀಡಿತ ಯುವಕ ದೆಹಲಿ ರಘುವೀರ್ ನಗರದ ನಿವಾಸಿ. ಸಾಗರ್‌ಪುರದ 20 ವರ್ಷದ ಯುವತಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಮದುವೆಗೆ ಮನೆಯವರು ವಿರೋಧಿಸಿದ್ದರಿಂದ ಡಿಸೆಂಬರ್ 21ರಂದು ಓಡಿ ಹೋಗಿ ಮದುವೆಯಾಗಿದ್ದ. ಜೈಪುರದ ದೇವಸ್ಥಾನದಲ್ಲಿ ಮದುವೆಯಾದ ಜೋಡಿ, ದೆಹಲಿಗೆ ಹಿಂತಿರುಗಿ ರಜೌರಿ ಗಾರ್ಡನ್ ಪ್ರದೇಶದಲ್ಲಿ ವಾಸವಾಗಿದ್ದರು.