
ಮೊಮ್ಮಗನ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಿಲಾಯನ್ಸ್ ಸಮೂಹದ ಮಾಲೀಕ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ, ಇದೇ ಖುಷಿಯಲ್ಲಿ ಜಾಮ್ ನಗರದಲ್ಲಿ ದೊಡ್ಡದೊಂದು ಪಾರ್ಟಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ.
ಈ ಪಾರ್ಟಿಯಲ್ಲಿ ಬಾಲಿವುಡ್ ನಟರಾದ ರಣಬೀರ್ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಭಾಗಿಯಾಗಲಿದ್ದಾರೆ.
ಎಲ್ಲಾ ಅತಿಥಿಗಳಿಗೂ ನೀಡಲಾದ ಆಮಂತ್ರಣದಲ್ಲಿ, ಕೋವಿಡ್ ವಿರುದ್ಧ ತೆಗೆದುಕೊಳ್ಳಬೇಕಾದ ಸುರಕ್ಷತೆಗಳ ಬಗ್ಗೆ ತಿಳಿಸಲಾಗಿದ್ದು, ಕೋವಿಡ್ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ಕಡ್ಡಾಯಗೊಳಿಸಲಾಗಿದೆ.
ತಮ್ಮೂರಿನಿಂದ ಖಾಸಗಿ ಜೆಟ್‌ನಲ್ಲಿ ಬರುವ ಎಲ್ಲಾ ಅತಿಥಿಗಳು ಡಿಸೆಂಬರ್ 7ರಿಂದ ಪ್ರತಿನಿತ್ಯ ಕೋವಿಡ್ ಪರೀಕ್ಷಾ ವರದಿಗಳನ್ನು ತೋರಿಸಬೇಕಂತೆ. ಇದೇ ವೇಳೆ, ಪಾರ್ಟಿಗೆ ಹೋಗುವ ಮಂದಿಗೆ ಮುಂಬೈಯಿಂದ ಜಾಮ್ ನಗರಕ್ಕೆ ವಿಮಾನಗಳ ವ್ಯವಸ್ಥೆ ಮಾಡಲಾಗಿದ್ದು, ಅಂಬಾನಿ ಗೆಸ್ಟ್‌ಹೌಸ್‌ನಲ್ಲಿ ಕ್ವಾರಂಟೈನ್ ಆಗಲು ಸಹ ಅವಕಾಶ ಮಾಡಿಕೊಡಲಾಗಿದೆಯಂತೆ.
ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತ: ಗೊಂದಲ ತಂದ ಅಧಿಕಾರಿಗಳ ಹೇಳಿಕೆ
ಪಾರ್ಟಿ ವೇಳೆ ಮಕ್ಕಳಿಗೆ ಆಟವಾಡಲೆಂದು ನೆದರ್ಲೆಂಡ್ಸ್‌ನಿಂದ ಆಟಿಕೆಗಳನ್ನು ತರಲಾಗಿದ್ದು, ಇಟಲಿ ಹಾಗೂ ಥಾಯ್ಲೆಂಡ್‌ಗಳಿಂದ ಶೆಫ್‌ಗಳನ್ನು ಕರೆಯಿಸಲಾಗಿದೆ. ಪಾರ್ಟಿ ನಡೆಯಲಿರುವ ಜಾಗವನ್ನು ಸಂಪೂರ್ಣವಾಗಿ ಕ್ವಾರಂಟೈನ್ ಮಾಡಿ, ಬಯೋ ಬಬಲ್ ರೀತಿಯ ವಾತಾವರಣ ಸೃಷ್ಟಿಸಲಾಗುವುದು.
ಪೃಥ್ವಿ ಆಕಾಶ್ ಅಂಬಾನಿಯ ಮೊದಲನೇ ವರ್ಷದ ಹುಟ್ಟುಹಬ್ಬದಂದು ಅಂಬಾನಿ ಫಾರ್ಮ್‌ಹೌಸ್ ಸುತ್ತಲಿನ ಊರುಗಳಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದ್ದು, ಜಾಮ್ ನಗರದ ಸುತ್ತ ಇರುವ ಅನಾಥಾಶ್ರಮಗಳಲ್ಲಿರುವ ಮಕ್ಕಳಿಗೆ ಆಟಿಕೆಗಳನ್ನು ಕಳುಹಿಸಲಾಗುತ್ತಿದೆ.
2019ರಲ್ಲಿ ಮದುವೆಯಾದ ಆಕಾಶ್ ಮತ್ತು ಶ್ಲೋಕಾ ಅಂಬಾನಿ ಡಿಸೆಂಬರ್ 10, 2020ರಂದು ತಮ್ಮ ಮೊದಲ ಮಗುವಿಗೆ ಪೋಷಕರಾಗಿದ್ದಾರೆ.