ಒಂದೇ ರೀತಿ ಕಾಣುವ ಅವಳಿ-ಜವಳಿ ಸಹೋದರ, ಸಹೋದರಿಯರು ಸಾಕಷ್ಟು ಕನ್ ಫ್ಯೂಸ್ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಅಣ್ಣನ ಹೆಸರಿನಲ್ಲಿ ತಮ್ಮ, ತಮ್ಮನ ಹೆಸರಿನಲ್ಲಿ ಅಣ್ಣ ಪರೀಕ್ಷೆಗಳನ್ನು ಬರೆದಿರುವ ಪ್ರಕರಣಗಳನ್ನು ನಾವು ನೋಡಿದ್ದೇವೆ.
ಆದರೆ, ಇಲ್ಲೊಂದು ಖತರ್ನಾಕ್ ಅವಳಿ ಜೋಡಿ ಇದೆ. ಇವರಲ್ಲಿ ಒಬ್ಬ ನಾಯಿ ಕಳ್ಳತನ ಆರೋಪದಲ್ಲಿ ಜೈಲಿನಲ್ಲಿದ್ದಾನೆ. ಮತ್ತೊಬ್ಬ ಮನೆಯಲ್ಲಿದ್ದಾನೆ.
ಜೈಲಿನಲ್ಲಿದ್ದಾತ ಐಡಿಯಾ ಉಪಯೋಗಿಸಿ ತನ್ನ ಸೋದರನನ್ನು ಜೈಲಿನಲ್ಲಿ ಬಿಟ್ಟು ತಾನು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ!
ನಾರ್ಥ್ ಹ್ಯಾಂಪ್ಟನ್ ಶೈರ್ ನ ಎಚ್ಎಂಪಿ ಫೈವ್ ವೆಲ್ಸ್ ಜೈಲಿನಲ್ಲಿ 24 ವರ್ಷದ ಎಲ್ಹಾಜ್ ಡಯಾರಸೋಬ ಎಂಬ ಯುವಕ ಶಿಕ್ಷೆ ಅನುಭವಿಸುತ್ತಿದ್ದ. ಎಷ್ಟು ದಿನವಾದರೂ ಬಿಡುಗಡೆ ಆಗುವ ಲಕ್ಷಣ ಕಾಣಲಿಲ್ಲ. ಆಗಾಗ್ಗೆ ತನ್ನ ಸಹೋದರನನ್ನು ನೋಡಲು ಬರುತ್ತಿದ್ದ ತನ್ನ ಸೋದರನನ್ನೇ ತನ್ನ ಜಾಗದಲ್ಲಿ ಜೈಲಿನಲ್ಲಿ ಬಿಟ್ಟು ಕೆಲ ಕಾಲ ಸ್ವಚ್ಛಂದವಾಗಿ ಇರಬಹುದೆಂದು ಯೋಚನೆ ಮಾಡಿದ.
2 ವರ್ಷಗಳ ಬಳಿಕ ಈ ಬಾರಿ ರಾಜ್ಯ ರಾಜಧಾನಿಯಲ್ಲಿ ನಡೆಯಲಿದೆ ʼಮಾವಿನ ಮೇಳʼ
ತಡ ಮಾಡದೇ, ತನ್ನನ್ನು ನೋಡಲು ಬಂದ ಸೋದರನ ಕೈಗೆ ಜೈಲುವಾಸಿಗಳಿಗೆ ಹಾಕುವ ಕೈ ಬ್ಯಾಂಡ್ ಅನ್ನು ಹಾಕಿದ. ಹೀಗೆ ಹಾಕಿ ಜೈಲಿನಿಂದ ಹೊರ ನಡೆಯಲು ಅಣಿಯಾಗಿದ್ದ. ಮತ್ತೊಂದೆಡೆ, ತಪ್ಪನ್ನೇ ಮಾಡದೆ ಸೋದರನ ಬದಲಿಗೆ ಕೈ ಬ್ಯಾಂಡ್ ಹಾಕಿಕೊಂಡು ಸಹ ಖೈದಿಗಳ ಜೊತೆಗೆ ಹೆಜ್ಜೆ ಹಾಕುತ್ತಿದ್ದವನ ಭಾವ ಭಂಗಿಗಳನ್ನು ಚಾಣಾಕ್ಷ ಜೈಲು ಸಿಬ್ಬಂದಿ ನೋಡಿದರು.
ಆಗಲೇ ಅವರಿಗೆ ಅನುಮಾನ ಉಂಟಾಗಿದ್ದು. ಶಿಕ್ಷೆ ಅನುಭವಿಸುತ್ತಿದ್ದವನ ಭಾವ ಭಂಗಿಗೂ ಈತನ ಚಲನವಲನಕ್ಕೂ ವ್ಯತ್ಯಾಸವನ್ನು ಪತ್ತೆ ಮಾಡಿದರು. ಕೂಡಲೇ, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಿತ್ತು. ಇದೇ ವೇಳೆಗೆ ಜೈಲಿನಿಂದ ಹೊರಗೆ ಇನ್ನೇನು ಹೆಜ್ಜೆ ಇಡಬೇಕೆನ್ನುವಷ್ಟರಲ್ಲಿ ಜೈಲು ಸಿಬ್ಬಂದಿ ಒರಿಜಿನಲ್ ಖೈದಿಯನ್ನು ಹೆಡೆಮುರಿ ಕಟ್ಟಿ ಒಳಗೆ ಕರೆದೊಯ್ದಿದ್ದಾರೆ.