
ಚಾಮರಾಜನಗರ: ವಿಚಾರಣದೀನ ಕೈದಿಯೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿರುವ ಘಟನೆ ತಮಿಳುನಾಡಿನ ಹೊಸೂರು ಬಳಿ ನಡೆದಿದೆ.
ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಮೇಗಲಹುಂಡಿಯ ಸುರೇಶ್ (28) ಎಂಬ ಆರೋಪಿಯನ್ನು ಚಾಮರಾಜನಗರದ ಉಪಕಾರಾಗ್ರಹದಿಂದ ತಮಿಳುನಾಡಿನ ಸತ್ಯಮಂಗಲಂ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸರ ಕಣ್ತಪ್ಪಿಸಿ ಆರೋಪಿ ಪರಾರಿಯಾಗಿದ್ದಾನೆ.
ವಿಚಾರಣೆಗಾಗಿ ಕೋರ್ಟ್ ಗೆ ಕರೆದೊಯ್ಯುವ ವೇಳೆ ಹೊಸೂರು ಬಳಿ ಪೊಲೀಸರು, ವಾಹನ ನಿಲ್ಲಿಸಿ ಟೀ ಕುಡಿಯಲು ನಿಂತಿದ್ದರು. ಈ ವೇಳೆ ಪೊಲೀಸ್ ವಾಹನದಿಂದ ಕೈದಿ ಎಸ್ಕೇಪ್ ಆಗಿದ್ದಾನೆ. ತಪ್ಪಿಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.