ಬೆಂಗಳೂರು: ಡಕಾಯಿತಿ ಪ್ರಕ್ರಣದ ಆರೋಪಿ ಗಣೇಶ್ ಜೈಲಿನಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಆರೋಪಿ ಗಣೇಶ್ ಸ್ನೇಹಿತ ವಿನೋದ್ ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಗಣೇಶ್ ಮರ್ಗಾಂಗಕ್ಕೆ ಖಾರದಪುಡಿ ಎರಚಲಾಗಿದ್ದು, ನೋವಿನ ನಡುವೆಯೂ ನಾಲ್ಕು ದಿನ ಠಾಣೆಯಲ್ಲಿಯೇ ಇರಿಸಿಕೊಂಡಿದ್ದರು. ಆರೋಗ್ಯ ಹದಗೆಡುತ್ತಿದ್ದಂತೆ ತರಾತುರಿಯಲ್ಲಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ. ಪೊಲೀಸರ ಟಾರ್ಚರ್ ನಿಂದಲೇ ಗಣೇಶ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.
ಮೃತ ಗಣೇಶ್ ನನಗೆ ಎರಡೂವರೆ ಲಕ್ಷ ಹಣ ನೀಡಿದ್ದ ಈ ಬಗ್ಗೆ ನನಗೂ ಹಲವು ಬಾರಿ ಕರೆ ಮಾಡಿದ್ದ. ಇದೇ ವಿಚಾರವಾಗಿ ನನ್ನನ್ನು ಪೊಲೀಸರು ಐದು ದಿನ ಠಾಣೆಯಲ್ಲಿ ಅಕ್ರಮವಾಗಿರಿಸಿಕೊಂಡಿದ್ದರು. ಬಳಿಕ ನನ್ನನ್ನು ಹೊರ ಬಿಡಲು 6 ಲಕ್ಷ ರೂಪಾಯಿ ಹಾಗೂ ಚಿನ್ನ ತೆಗೆದುಕೊಂಡಿದ್ದಾರೆ. ನನ್ನ ತಂದೆಯ ಮೇಲೂ ಹಲ್ಲೆ ನಡೆಸಿದ್ದಾರೆ. ಹೆಚ್.ಎಸ್.ಆರ್ ಬಡಾವಣೆ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಹಣ, ಚಿನ್ನ ಪಡೆದಿದ್ದಾಗಿ ಆರೋಪಿಸಿದ್ದಾರೆ.