ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಪ್ರಕಟಿಸಲಾಗುವ ‘ಶಿಕ್ಷಣ ವಾರ್ತೆ’ ಮಾಸಿಕ ಪತ್ರಿಕೆ ಮುದ್ರಣ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಶಿಕ್ಷಕರ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
‘ಶಿಕ್ಷಣ ವಾರ್ತೆ’ ಮಾಸಿಕ ಪತ್ರಿಕೆಯ ಮೂಲಕ ಶಿಕ್ಷಣ ಇಲಾಖೆಯ ಮಾಹಿತಿ, ಪ್ರತಿ ತಿಂಗಳು ನಡೆಯುವ ಕಾರ್ಯಕ್ರಮ, ಶಿಕ್ಷಕರು, ವಿದ್ಯಾರ್ಥಿಗಳ ಲೇಖನಗಳು ಇರುತ್ತಿದ್ದವು. ಕಳೆದ ಆರು ತಿಂಗಳಿನಿಂದ ಮುದ್ರಣ ನಿಲ್ಲಿಸಲಾಗಿದೆ. ರಾಜ್ಯದಲ್ಲಿರುವ 47,000 ಸರ್ಕಾರಿ ಶಾಲೆಗಳಿಗೆ ‘ಶಿಕ್ಷಣ ವಾರ್ತೆ’ಯ ಪ್ರತಿಗಳನ್ನು ಕಳುಹಿಸಲಾಗುತ್ತಿತ್ತು. ಇದೀಗ ಮುದ್ರಣ ಸ್ಥಗಿತಗೊಳಿಸಲಾಗಿದ್ದು, ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.