alex Certify ವಿಚ್ಛೇದಿತ ಪತ್ನಿ ಹಾಗೂ ಮಕ್ಕಳಿಗೆ 5,473 ಕೋಟಿ ರೂ. ಜೀವನಾಂಶ ನೀಡಲು ದುಬೈ ದೊರೆಗೆ ಬ್ರಿಟನ್ ಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದಿತ ಪತ್ನಿ ಹಾಗೂ ಮಕ್ಕಳಿಗೆ 5,473 ಕೋಟಿ ರೂ. ಜೀವನಾಂಶ ನೀಡಲು ದುಬೈ ದೊರೆಗೆ ಬ್ರಿಟನ್ ಕೋರ್ಟ್ ಆದೇಶ

ಅರಬ್​ ರಾಷ್ಟ್ರಗಳ ಪ್ರಧಾನಿ ಶೇಖ್​ ಮೊಹಮ್ಮದ್​ ಬಿನ್ ರಶೀದ್​ ಅಲ್​ ಮಕ್ತೌಮ್​​​ ಗೆ ಮಾಜಿ ಪತ್ನಿ ಹಯಾ ಬಿಂತ್​ ಅಲ್​ ಹುಸೇನ್​ರಿಗೆ 728 ಮಿಲಿಯನ್​​ ಡಾಲರ್ (5,473 ಕೋಟಿ ರೂ.) ಹಣವನ್ನು ವಿಚ್ಚೇದನದ ಪರಿಹಾರ ರೂಪದಲ್ಲಿ ಪಾವತಿಸುವಂತೆ ಬ್ರಿಟನ್​ನ ನ್ಯಾಯಾಲಯವು ಆದೇಶ ನೀಡಿದೆ.

ಹಯಾ ಅವರ ಉಳಿದ ಜೀವನದ ಅವಧಿಗೆ ಭದ್ರತಾ ವೆಚ್ಚವಾಗಿ ಹಾಗೂ ದಂಪತಿಯ ಇಬ್ಬರು ಮಕ್ಕಳ ವೆಚ್ಚವನ್ನು ಭರಿಸಲು ಈ ಹಣವನ್ನು ಬಳಸುವಂತೆ ಕೋರ್ಟ್ ಸೂಚನೆ ನೀಡಿದೆ.

ಒಟ್ಟು ಇತ್ಯರ್ಥಕ್ಕೆ ಯಾವುದೇ ಸ್ಥಿರ ಮೌಲ್ಯವಿಲ್ಲ, ಏಕೆಂದರೆ ಶೇಖ್ ಮೊಹಮ್ಮದ್ ತನ್ನ 9 ಮತ್ತು 14 ವರ್ಷ ವಯಸ್ಸಿನ ಇಬ್ಬರು ಮಕ್ಕಳಿಗೆ ವಾರ್ಷಿಕ ಭದ್ರತಾ ವೆಚ್ಚವನ್ನು ಅವರ ಜೀವಿತಾವಧಿಯವರೆಗೆ ಅಥವಾ ಮುಂದಿನ ನ್ಯಾಯಾಲಯದ ಆದೇಶವನ್ನು ನೀಡುವವರೆಗೆ ಪಾವತಿಸಬೇಕು ಎಂದು ತೀರ್ಪು ನೀಡಿದೆ.

ಈ ಸಂಬಂಧ ಲಿಖಿತ ತೀರ್ಪು ಪ್ರಕಟಿಸಿದ ಬ್ರಿಟನ್​ನ ನ್ಯಾಯಾಲಯವು ರಾಜಕುಮಾರಿ ಹಯಾ ಹಾಗೂ ಅವರ ಮಕ್ಕಳಾದ ಜಲೀಲಾ ಮತ್ತು ಜಾಯೇದ್​ಗೆ ದೊಡ್ಡ ಬೆದರಿಕೆಯೇ ಶೇಖ್​ ಮೊಹಮ್ಮದ್​ ಹೊರತು ಇನ್ಯಾರೂ ಅಲ್ಲ ಎಂದು ಹೇಳಿದೆ.

ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿದ ನ್ಯಾಯಾಲಯವು, ಹಯಾ ಬಿಂತ್​ ಅಲ್​ ಹುಸೇನ್​​ರಿಗೆ ಬರೋಬ್ಬರಿ 728 ಮಿಲಿಯನ್ ಡಾಲರ್​ ಪಾವತಿಸುವಂತೆ ಹೇಳಿದೆ. ಅಂದಹಾಗೆ ಇದು ಬ್ರಿಟನ್​​ನಲ್ಲಿ ಈವರೆಗೆ ನೀಡಲಾದ ಅತಿ ದೊಡ್ಡ ವಿಚ್ಚೇದನ ಪರಿಹಾರದ ಮೊತ್ತ ಎಂದು ವ್ಯಾಖ್ಯಾನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...