
ಕ್ಯಾಲಿಫೋರ್ನಿಯಾ ಹರಾಜಿನಲ್ಲಿ ರಾಜಕುಮಾರಿ ಡಯಾನಾ ಅವರ ಉಡುಗೆ ಅಂದಾಜು ಬೆಲೆಗಿಂತ 11 ಪಟ್ಟು ಹೆಚ್ಚಾಗಿದೆ.
ರಾಜಕುಮಾರಿ ಡಯಾನಾ ಮರೆಯಾಗಿರಬಹುದು. ಆದರೆ, ಅವರ ಉತ್ಸಾಹ ಮತ್ತು ಫ್ಯಾಶನ್ ಸೆನ್ಸ್ ಯಾವಾಗಲೂ ಹಸಿರಾಗಿರುತ್ತದೆ. 1980ರ ದಶಕದಲ್ಲಿ ದಿವಂಗತ ರಾಜಕುಮಾರಿ ಡಯಾನಾ ಧರಿಸಿದ್ದ ನೀಲಿ ಮತ್ತು ಕಪ್ಪು ಉಡುಗೆ ಕ್ಯಾಲಿಫೋರ್ನಿಯಾ ಮೂಲದ ಹರಾಜು ಮನೆಯಲ್ಲಿ ಅದರ ಅಂದಾಜಿನ 11 ಪಟ್ಟು ದಾಖಲೆಯ ಮೊತ್ತವನ್ನು ಪಡೆದುಕೊಂಡಿದೆ.
ಸೋಮವಾರ ತಡರಾತ್ರಿ ಬೆವರ್ಲಿ ಹಿಲ್ಸ್ ಜೂಲಿಯನ್ಸ್ ಹರಾಜಿನಲ್ಲಿ ಮೊರೊಕನ್-ಬ್ರಿಟಿಷ್ ಫ್ಯಾಷನ್ ಡಿಸೈನರ್ ಜಾಕ್ವೆಸ್ ಅಜಗುರಿ ವಿನ್ಯಾಸಗೊಳಿಸಿದ ಉಡುಪನ್ನು $1,143,000 ಗೆ ಮಾರಾಟ ಮಾಡಲಾಗಿದ್ದು, ಹಿಂದಿನ ದಾಖಲೆಯಾದ $604,800 ಅನ್ನು ಮುರಿದಿದೆ ಎಂದು ಘೋಷಿಸಿದೆ. ಬ್ರಿಟಿಷ್ ರಾಜಮನೆತನದ ದಿವಂಗತ ಡಯಾನಾ ಅವರು ಏಪ್ರಿಲ್ 1985 ರಲ್ಲಿ ಇಟಲಿಯ ಫ್ಲಾರೆನ್ಸ್ ನಲ್ಲಿ ಮತ್ತು ಮೇ 1986 ರಲ್ಲಿ ಕೆನಡಾದ ವ್ಯಾಂಕೋವರ್‌ನಲ್ಲಿ ಈ ಉಡುಪನ್ನು ಧರಿಸಿದ್ದರು. ಇದು ಸ್ಟಾರ್ ಗಳೊಂದಿಗೆ ಕಸೂತಿ ಮಾಡಿದ ಕಪ್ಪು ವೆಲ್ವೆಟ್ ರವಿಕೆ ಹೊಂದಿದೆ.