ಸಾಮಾನ್ಯವಾಗಿ ಚಲನಚಿತ್ರ ನಟ-ನಟಿಯರು, ಕ್ರೀಡಾಪಟುಗಳು, ಗಾಯಕರು, ಇನ್ನಿತರೆ ಕ್ಷೇತ್ರಗಳ ಸಾಧಕರ ಹಳೆಯ ಮತ್ತು ಹೊಸ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುತ್ತದೆ.
ಅದೇ ರೀತಿಯಲ್ಲಿ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸುಮಾರು 30 ವರ್ಷಗಳ ಹಿಂದಿನ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗತೊಡಗಿದೆ.
ಪ್ರಸ್ತುತ ಜರ್ಮನಿ ಪ್ರವಾಸದಲ್ಲಿರುವ ಮೋದಿಯವರ ಈ 3 ದಶಕದ ಹಿಂದಿನ ಫೋಟೋ ಮತ್ತು ಈಗಿನ ಫೋಟೋ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ. 1993 ರಲ್ಲಿ ನರೇಂದ್ರ ಮೋದಿಯವರು ಯುಎಸ್ ನಿಂದ ಭಾರತಕ್ಕೆ ಬರುವ ಮಾರ್ಗಮಧ್ಯದಲ್ಲಿ ವಿಮಾನ ಕೆಲಕಾಲ ಫ್ರಾಂಕ್ ಫರ್ಟ್ ನಲ್ಲಿ ಇಳಿದಿತ್ತು. ಆ ಸಂದರ್ಭದಲ್ಲಿ ಮೋದಿ ಪಶ್ಚಿಮ ಯುರೋಪ್ ನ ಚಕ್ರವರ್ತಿ ಚಾರ್ಲಿಮ್ಯಾಗ್ನೆ ಪ್ರತಿಮೆ ಎದುರು ನಿಂತು ಫೋಟೋ ತೆಗೆಸಿಕೊಂಡಿದ್ದರು.
BIG NEWS: ಸಚಿವ ಅಶ್ವತ್ಥನಾರಾಯಣ ರಾಜೀನಾಮೆ ನೀಡಲಿ; PSI ಪರೀಕ್ಷಾ ಅಕ್ರಮ ಹಗರಣ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ; ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹ
ಈ ಫೋಟೋವೇ ಈಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ಮತ್ತು ಟ್ರೆಂಡಿಂಗ್ ವಿಚಾರವಾಗಿದೆ. ಪ್ರಸ್ತುತ ಜರ್ಮನಿ ಪ್ರವಾಸದಲ್ಲಿರುವ ಮೋದಿಯವರ ಫೋಟೋ ಮತ್ತು ಹಳೆಯ ಫೋಟೋಗಳ ಬಗ್ಗೆ ಹೋಲಿಕೆಗಳನ್ನು ಮಾಡಲಾಗುತ್ತಿದ್ದು, ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.