ಕೊರೊನಾ ಎರಡನೇ ಅಲೆ ಅಬ್ಬರದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕಡಿಮೆಯಾಗಿಲ್ಲ. ಮೇ ತಿಂಗಳಿನಲ್ಲಿ ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ ಜನಪ್ರಿಯತೆ ರೇಟಿಂಗ್ ಕುಸಿದಿದೆ. ಆದ್ರೆ ನರೇಂದ್ರ ಮೋದಿ ಜಾಗತಿಕ ನಾಯಕರನ್ನು ಮೀರಿಸಿದ್ದಾರೆ ಎಂದು ಅಮೆರಿಕದ ಮಾರ್ನಿಂಗ್ ಕನ್ಸಲ್ಟಿಂಗ್ ಪೊಲಿಟಿಕಲ್ ಇಂಟೆಲಿಜೆನ್ಸ್ ನಡೆಸಿದ ಸಮೀಕ್ಷೆ ತಿಳಿಸಿದೆ. ಕೇವಲ ಮೂವರು ವಿಶ್ವ ನಾಯಕರ ರೇಟಿಂಗ್ 60 ಕ್ಕಿಂತ ಹೆಚ್ಚಿದೆ. ಅದರಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನದಲ್ಲಿದ್ದಾರೆ.
ಮಾರ್ನಿಂಗ್ ಕನ್ಸಲ್ಟಿಂಗ್ ಪೊಲಿಟಿಕಲ್ ಇಂಟೆಲಿಜೆನ್ಸ್ ನ ಅಂಕಿಅಂಶಗಳ ಪ್ರಕಾರ, ಪಿಎಂ ಮೋದಿಯವರ ಅಪ್ರೂವಲ್ ರೇಟಿಂಗ್ ಪ್ರಸ್ತುತ ಶೇಕಡಾ 66 ರಷ್ಟಿದೆ. ಇಟಲಿಯ ಪಿಎಂ ಮಾರಿಯೋ ದ್ರಾಘಿಯವರ ಅಪ್ರೂವಲ್ ರೇಟಿಂಗ್ ಶೇಕಡಾ 65 ರಷ್ಟಿದೆ. ಮೆಕ್ಸಿಕೊ ಅಧ್ಯಕ್ಷ ಲೋಪೆಜ್ ಒಬ್ರಡಾರ್ ಅಪ್ರೂವಲ್ ರೇಟಿಂಗ್ ಶೇಕಡಾ 63 ರಷ್ಟಿದೆ.
ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೊ, ದಕ್ಷಿಣ ಕೊರಿಯಾ, ಸ್ಪೇನ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ಸರ್ಕಾರಿ ನಾಯಕರ ಅಪ್ರೂವಲ್ ರೇಟಿಂಗ್ಗಳನ್ನು ಪತ್ತೆ ಮಾಡುತ್ತದೆ. ವಾರಕ್ಕೊಮ್ಮೆ ಇದನ್ನು ನವೀಕರಿಸುತ್ತದೆ. ಪಿಎಂ ಮೋದಿಯವರ ಅಪ್ರೂವಲ್ ರೇಟಿಂಗ್ನಲ್ಲಿನ ಸುಧಾರಣೆಯಾಗಲು ಜೂನ್ 7 ರಂದು ಅವರು ಮಾಡಿದ ಭಾಷಣ ಕಾರಣ. ಭಾಷಣದಲ್ಲಿ ಅವರು ಅನೇಕ ದೊಡ್ಡ ಘೋಷಣೆಗಳನ್ನು ಮಾಡಿದ್ದರು.