
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರ ಅಂತ್ಯಕ್ರಿಯೆ ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನೆರವೇರಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಮೋದಿಯವರ ತಾಯಿ ಶತಾಯಿಷಿ ಹೀರಾ ಬೆನ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಹೀರಾ ಬೆನ್ ಅವರ ಚಿತೆಗೆ ಪ್ರಧಾನಿ ಮೋದಿ ಹಾಗೂ ಸಹೋದರರು ಅಗ್ನಿ ಸ್ಪರ್ಶ ಮಾಡಿದ್ದಾರೆ.