alex Certify ಅಂತಿಮ ಯಾತ್ರೆಯಲ್ಲಿ ತಾಯಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಮೋದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತಿಮ ಯಾತ್ರೆಯಲ್ಲಿ ತಾಯಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಮೋದಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಪಂಕಜ್ ಮೋದಿ ನಿವಾಸದಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟಿದ್ದಾರೆ.

ಗಾಂಧಿನಗರದ ಸೆಕ್ಟರ್ 30 ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇಂದು ಬೆಳಗಿನ ಜಾವ 3.30 ಕ್ಕೆ ಅಹಮದಾಬಾದ್ ನಲ್ಲಿರುವ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಹೀರಾ ಬೆನ್ ನಿಧನರಾಗಿದ್ದು, ತಾಯಿ ನಿಧನರಾದ ಸುದ್ದಿ ತಿಳಿಯುತ್ತಲೇ ಪ್ರಧಾನಿ ಮೋದಿ ಅಹಮದಾಬಾದ್ ಗೆ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅಂತ್ಯಕ್ರಿಯೆಗೆ ಮುನ್ನ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿದ್ದು, ಮೋದಿ ಹೆಗಲು ಕೊಟ್ಟಿದ್ದಾರೆ.

https://twitter.com/ANI/status/1608657708382826498

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...