ನವದೆಹಲಿ: ಮೊದಲ ಅಮೃತ್ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ನಾಳೆ (ಡಿಸೆಂಬರ್ 30) ರಂದು ಚಾಲನೆ ನೀಡಲಿದ್ದಾರೆ.
ಎರಡು ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ನಾಳೆ ಹಸಿರು ನಿಶಾನೆ ತೋರಲಾಗುವುದು, ಮೊದಲ ರೈಲು ದೆಹಲಿಯ ಆನಂದ್ ವಿಹಾರ್ ನಡುವೆ ಅಯೋಧ್ಯೆ ಮೂಲಕ ಬಿಹಾರದ ದರ್ಭಾಂಗಕ್ಕೆ ಮತ್ತು ಎರಡನೇ ರೈಲು ಮಾಲ್ಡಾ ಮತ್ತು ಬೆಂಗಳೂರು ನಡುವೆ ಸಂಚರಿಸಲಿದೆ.
ಅಮೃತ್ ಭಾರತ್ ಎಕ್ಸ್ಪ್ರೆಸ್ ವಿಶೇಷತೆ
1. ಸಿಸಿಟಿವಿ ಅಳವಡಿಕೆ, ಸೆನ್ಸಾರ್ ವಾಟರ್ ಟ್ಯಾಪ್, ಮೆಟ್ರೋದಂತಹ ಘೋಷಣೆ ವ್ಯವಸ್ಥೆ ಇರಲಿದೆ. ಒಟ್ಟು 22 ಕೋಚ್ಗಳು ಇರಲಿದ್ದು, 14 ಸ್ಲೀಪರ್ ಹಾಗೂ 8 ಸಾಮಾನ್ಯ ಕೋಚ್ಗಳು ಇರಲಿವೆ. ಆಸನ ಸಾಮರ್ಥ್ಯ 1,500 ಇರಲಿದೆ.
2. ರೈಲಿನ “ಪುಶ್-ಪುಲ್” ಕಾರ್ಯಾಚರಣೆಯನ್ನು ಅನುಮತಿಸಲು ರೈಲಿನ ಪ್ರತಿ ತುದಿಯಲ್ಲಿ 6,000 ಎಚ್ಪಿಯೊಂದಿಗೆ WAP5 ಲೋಕೋಮೋಟಿವ್ ಎಂಜಿನ್ ಹೊಂದಿದೆ. ಪುಶ್-ಪುಲ್ ರೈಲಿನ ದೊಡ್ಡ ಪ್ರಯೋಜನವೆಂದರೆ ವೇಗ ಜಾಸ್ತಿ ಇರುತ್ತದೆ ಮತ್ತು ಪ್ರಯಾಣದ ಅವಧಿಯನ್ನು ಇದು ಕಡಿಮೆ ಮಾಡುತ್ತದೆ.
3. ದರ್ಭಂಗಾ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್ ಅಮೃತ್ ಭಾರತ್ ಎಕ್ಸ್ಪ್ರೆಸ್ ಮತ್ತು ಮಾಲ್ಡಾ ಟೌನ್-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಸ್ (ಬೆಂಗಳೂರು) ಅಮೃತ್ ಭಾರತ್ ಎಕ್ಸ್ಪ್ರೆಸ್ ಎಂಬ ಎರಡು ಹೊಸ ಅಮೃತ್ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಲಿದ್ದಾರೆ.
4. ಅಮೃತ್ ಭಾರತ್ ಎಕ್ಸ್ಪ್ರೆಸ್ ಪ್ರಾರಂಭವಾಗುವ ಮೊದಲು, ಮೇಲ್ / ಎಕ್ಸ್ಪ್ರೆಸ್ ರೈಲುಗಳಲ್ಲಿ ಸಂಬಂಧಿತ ವರ್ಗದ ಪ್ರಯಾಣಕ್ಕಿಂತ ಶೇಕಡಾ 15 ರಿಂದ 17 ರಷ್ಟು ಹೆಚ್ಚಿನ ದರವನ್ನು ಇರಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ರೈಲ್ವೆ ಬಹಿರಂಗಪಡಿಸಿದೆ.
5. ರೈಲಿನ ಪ್ರತಿ ತುದಿಯಲ್ಲಿ 6,000 ಎಚ್ಪಿ ಸಾಮರ್ಥ್ಯದ ಡಬ್ಲ್ಯುಎಪಿ 5 ಲೋಕೋಮೋಟಿವ್ ಅನ್ನು ಹೊಂದುವ ಸಾಧ್ಯತೆಯಿದೆ .ಅಮೃತ್ ಭಾರತ್ ರೈಲುಗಳು ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಆಸನಗಳು, ಉತ್ತಮ ಲಗೇಜ್ ರ್ಯಾಕ್ಗಳು ಮತ್ತು ಸೂಕ್ತ ಮೊಬೈಲ್ ಹೋಲ್ಡರ್ಗಳೊಂದಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳು ಸೇರಿದಂತೆ ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
6. ಕಿತ್ತಳೆ ಮತ್ತು ಬೂದು ಬಣ್ಣದ ಈ ರೈಲುಗಳು ಎಲ್ಇಡಿ ದೀಪಗಳು, ಸಿಸಿಟಿವಿ, ಸಾರ್ವಜನಿಕ ಮಾಹಿತಿ ವ್ಯವಸ್ಥೆ ಮತ್ತು ಇತರ ಹಲವಾರು ಸೌಲಭ್ಯಗಳನ್ನು ಸಹ ಹೊಂದಿರುತ್ತವೆ.