ಇಂದಿನಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2 ದಿನ ‘G20 ಶೃಂಗಸಭೆ’ ಆರಂಭವಾಗಿದ್ದು , ಭಾರತ್ ಮಂಟಪಕ್ಕೆ ಆಗಮಿಸಿದ ಜಾಗತಿಕ ನಾಯಕರಿಗೆ ಪ್ರಧಾನಿ ಮೋದಿ ( Narendra Modi) ಸ್ವಾಗತ ಕೋರಿದ್ದಾರೆ.
ನವದೆಹಲಿಯಲ್ಲಿ ಆಯೋಜನೆಗೊಂಡಿರುವ ಐತಿಹಾಸಿಕ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಹಲವು ದಿಗ್ಗಜ ನಾಯಕರು ಆಗಮಿಸಿದ್ದು, ಜಿ 20 ಯಲ್ಲಿ ವಿಶ್ವದ ದಿಗ್ಗಜ ನಾಯಕರ ಸಮಾಗಮವಾಗಲಿದೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಆಸ್ಟ್ರೇಲಿಯಾದ ಮಾಜಿ ಎಫ್ಎಂ ಆಸ್ಟ್ರೇಲಿಯಾ, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮುಖ್ಯಸ್ಥ, ಹಣಕಾಸು ಸ್ಥಿರತೆ ಮಂಡಳಿ ಅಧ್ಯಕ್ಷ, ಐಎಲ್ಒ ಮಹಾನಿರ್ದೇಶಕರು, ಐಎಂಎಫ್ ಅಧ್ಯಕ್ಷರು, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಡಬ್ಲ್ಯುಎಚ್ಒ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಡಬ್ಲ್ಯುಟಿಒ ಮಹಾನಿರ್ದೇಶಕ ನಾಗೋಜಿ ಒಕೊಂಜಿ ಜಿ ಜಿ 20 ಶೃಂಗಸಭೆಗೆ ಆಗಮಿಸಿದ್ದಾರೆ.