ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಪ್ರವಾಸದಲ್ಲಿದ್ದು, ಎರಡು ದಿನಗಳ ಭೇಟಿಯ ವೇಳೆ ಅವರು ತ್ರಿಶೂರ್ ಜಿಲ್ಲೆಯ ತ್ರಿಪ್ರಯಾರ್ ಪ್ರದೇಶದ ಶ್ರೀರಾಮಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಹಲವು ಪುಣ್ಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.
ಕೇರಳದ ನಾಟಿಕಾ ಗ್ರಾಮದ ತ್ರಿಪ್ರಯಾರ್ ಪ್ರದೇಶದಲ್ಲಿ ಗುರುವಾಯೂರಿನಿಂದ ಸುಮಾರು 22 ಕಿಮೀ ಮತ್ತು ಕೊಚ್ಚಿ ವಿಮಾನ ನಿಲ್ದಾಣದಿಂದ 60 ಕಿಮೀ ದೂರದಲ್ಲಿರುವ ಶ್ರೀ ರಾಮಸ್ವಾಮಿ ದೇವಾಲಯವು ಕೇರಳ ಸರ್ಕಾರವು ನೇಮಿಸಿದ ಸಾಮಾಜಿಕ-ಧಾರ್ಮಿಕ ಟ್ರಸ್ಟ್ ಕೊಚ್ಚಿನ್ ದೇವಸ್ವಂ ಬೋರ್ಡ್ನ ನಿಯಂತ್ರಣದಲ್ಲಿದೆ .