ನವದೆಹಲಿ : ‘ಪ್ರಧಾನಿ ಮೋದಿ’ ಪ್ರಮಾಣವಚನ ಸ್ವೀಕಾರ ಒಂದು ದಿನ ಮುಂದಕ್ಕೆ ಹೋಗಿದ್ದು, ಜೂ.9 ಕ್ಕೆ ನಿಗದಿಯಾಗಿದೆ.
ಈ ಮೊದಲು ಜೂ.8 ರಂದು 3 ನೇ ಬಾರಿಗೆ ದೇಶದ ಪ್ರಧಾನಿಯಾಗಿ ‘ನರೇಂದ್ರ ಮೋದಿ’ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿತ್ತು. ಆದರೀಗ ಪ್ರಧಾನಿ ಮೋದಿ’ ಪ್ರಮಾಣವಚನ ಸ್ವೀಕಾರ ಒಂದು ದಿನ ಮುಂದಕ್ಕೆ ಹೋಗಿದ್ದು, ಜೂ.9 ಕ್ಕೆ ನಿಗದಿಯಾಗಿದೆ. ಹಾಗೂ ಸಂಸದ ಕುಮಾರಸ್ವಾಮಿ ಅವರು ಕೂಡ ಜೂ.9 ರಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಜೂನ್ 9 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ, ಕಾರ್ಯಕ್ರಮವನ್ನು ಈಗ ಮುಂದೂಡಲಾಗುತ್ತಿದೆ. ವರದಿಗಳ ಪ್ರಕಾರ, ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಯ್ಡು ಅವರ ಪ್ರಮಾಣವಚನವನ್ನು ಆರಂಭದಲ್ಲಿ ಯೋಜಿಸಲಾದ ದಿನಾಂಕವಾದ ಜೂನ್ 9 ರ ಬದಲು ಜೂನ್ 12 ಕ್ಕೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.
3 ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರೆ. ಜೂ.9 ರಂದು ಸಂಜೆ ದೆಹಲಿಯಲ್ಲಿ ನರೇಂದ್ರ ಮೋದಿ’ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರದಿಂದ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಆದರೆ ಈ ಬಾರಿ ಗೆಲುವಿನ ಅಂತರ ಭಾರೀ ಕಡಿಮೆಯಾಗಿದೆ. ಮೋದಿ ಅವರು 1,52,513 ಮತಗಳ ಅಂತರದಿಂದ ಕಾಂಗ್ರೆಸ್ ಅಜಯ್ ರೈ ಅವರನ್ನು ಸೋಲಿಸಿದ್ದಾರೆ.