ನವದೆಹಲಿ : ಇತ್ತೀಚೆಗೆ ಮುಕ್ತಾಯಗೊಂಡ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈಜಿಪ್ಟ್ ಹುಡುಗಿ ಪ್ರದರ್ಶಿಸಿದ ಸುಮಧುರ ಹಾಡು “ದೇಶ್ ರಂಗೀಲಾ” ವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈಜಿಪ್ಟ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತೀಯ ಉಡುಪನ್ನು ಧರಿಸಿ ಕರಿಮನ್ ದೇಶಭಕ್ತಿ ಗೀತೆಯನ್ನು ಪ್ರದರ್ಶಿಸಿದರು.
ಕರಿಮನ್ ಅವರ ವೀಡಿಯೊವನ್ನು ಹಂಚಿಕೊಂಡ ಪ್ರಧಾನಿ ಮೋದಿ, “ಈಜಿಪ್ಟ್ ಕರಿಮನ್ ಅವರ ಈ ಗಾಯನವು ಸುಮಧುರವಾಗಿದೆ! ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಇದಕ್ಕೂ ಮುನ್ನ ಭಾನುವಾರ, ಭಾರತೀಯ ರಾಯಭಾರ ಕಚೇರಿ ಅವರ ಪ್ರದರ್ಶನದ ತುಣುಕನ್ನು ಟ್ವೀಟ್ ಮಾಡಿದ್ದು, “ಈಜಿಪ್ಟಿನ ಯುವತಿ ಕರಿಮನ್ ‘ಇಂಡಿಯಾ ಹೌಸ್’ ನಲ್ಲಿ ನಡೆದ 75 ನೇ #RepublicDay ಆಚರಣೆಯ ಸಂದರ್ಭದಲ್ಲಿ “ದೇಶ್ ರಂಗೀಲಾ” ಎಂಬ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು. ಅವರ ಸುಮಧುರ ಗಾಯನ ಎಲ್ಲರ ಗಮನ ಸೆಳೆದಿದೆ ಎಂದು ಹೇಳಿದೆ.