ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಮೂಲಕ ಅವರ ಪ್ರವಾಸ ಪ್ರಾರಂಭವಾಯಿತು, ನಂತರ ಅರುಣಾಚಲ ಪ್ರದೇಶದ ಇಟಾನಗರದಲ್ಲಿ ನಡೆದ ‘ವಿಕ್ಷಿತ್ ಭಾರತ್ ವಿಕ್ಷಿತ್ ಈಶಾನ್ಯ’ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು “ಸೆಲಾ ಸುರಂಗ” ವನ್ನು ಉದ್ಘಾಟಿಸಿದರು ಮತ್ತು ಸುಮಾರು 10,000 ಕೋಟಿ ರೂಪಾಯಿ ಮೌಲ್ಯದ “ಉನ್ನತಿ ಯೋಜನೆಯನ್ನು” ಅನಾವರಣಗೊಳಿಸಿದರು. ಸೆಲಾ ಸುರಂಗ ಮಾರ್ಗ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 9, 2019 ರಂದು ಅಡಿಪಾಯ ಹಾಕಿದ್ದರು
ಭಾರತ- ಚೀನಾ ಗಡಿಯ ಪೂರ್ವ ವಲಯದ ಕಡೆಗೆ ಉತ್ತಮ ಸಂಪರ್ಕಕ್ಕಾಗಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಸೆಲಾ ಸುರಂಗ ಯೋಜನೆಯು ಎರಡು ಸುರಂಗಗಳನ್ನು ಒಳಗೊಂಡಿದೆ. ಸುರಂಗ 1, ಇದು 980 ಮೀಟರ್ ಉದ್ದದ ಏಕ ಮಾರ್ಗದ ಸುರಂಗ ಮತ್ತು ಸುರಂಗ 2 ಇದು 1555 ಮೀಟರ್ ಉದ್ದದ ದ್ವಿಮಾರ್ಗ ಸುರಂಗವಾಗಿದೆ.