ಮಾಸ್ಕೋ : ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಪ್ರವಾಸದಲ್ಲಿದ್ದು, ಅವರಿಗೆ ಮಂಗಳವಾರ ಮಾಸ್ಕೋ ಕ್ರೆಮ್ಲಿನ್ ನ ಸೇಂಟ್ ಕ್ಯಾಥರೀನ್ ಹಾಲ್ ನಲ್ಲಿ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ಪ್ರಶಸ್ತಿಯನ್ನು ಔಪಚಾರಿಕವಾಗಿ ಪ್ರದಾನ ಮಾಡಲಾಗುತ್ತದೆ.
ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಮತ್ತು ಉಭಯ ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧಗಳನ್ನು ಬೆಳೆಸುವಲ್ಲಿ ಪ್ರಧಾನಿ ಮೋದಿಯವರ ಅಸಾಧಾರಣ ಕೊಡುಗೆಯನ್ನು ಈ ಪ್ರಶಸ್ತಿ ಗುರುತಿಸುತ್ತದೆ.
ಯೇಸುವಿನ ಮೊದಲ ಅಪೊಸ್ತಲ ಮತ್ತು ರಷ್ಯಾದ ಪೋಷಕ ಸಂತ ಸೇಂಟ್ ಆಂಡ್ರ್ಯೂ ಅವರ ಗೌರವಾರ್ಥವಾಗಿ 1698 ರಲ್ಲಿ ಜಾರ್ ಪೀಟರ್ ದಿ ಗ್ರೇಟ್ ಸ್ಥಾಪಿಸಿದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ದಿ ಫಸ್ಟ್ ಕಾಲ್ ಅನ್ನು ಅತ್ಯಂತ ವಿಶಿಷ್ಟ ನಾಗರಿಕ ಅಥವಾ ಮಿಲಿಟರಿ ಅರ್ಹತೆಗಾಗಿ ನೀಡಲಾಗುತ್ತದೆ.