ನವದೆಹಲಿ : ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಷ್ಟ್ರ ರಾಜಧಾನಿಯ ತಮ್ಮ ಅಧಿಕೃತ ನಿವಾಸದಲ್ಲಿ ಹಸುಗಳಿಗೆ ಮೇವನ್ನು ನೀಡಿ ಸಂಕ್ರಾಂತಿ ಆಚರಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಪುಂಗನೂರು ತಳಿಯ ಸ್ಪಾರ್ಚಾ ಹಸುಗಳಿಗೆ ಪ್ರಧಾನಿ ಮೋದಿ ಹಸಿರು ಹುಲ್ಲು ತಿನ್ನಿಸಿ ಧಾನ್ಯ ನೀಡಿದರು. ದೆಹಲಿಯ 7, ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದ ಹುಲ್ಲು ಹಾಸಿನಲ್ಲಿ ಮೋದಿ ಅವರು ಹಸುಗಳಿಗೆ ಮೇವು ತಿನ್ನಿಸುವ ಮೂಲಕ ಸಂಕ್ರಾಂತಿ ಆಚರಿಸಿದ್ದಾರೆ . ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದೇ ರೀತಿ ಪ್ರಧಾನಿ ಮೋದಿ ತಮ್ಮ ಮನೆಯ ಅಂಗಳದಲ್ಲಿ ಹಸುಗಳ ಮೈ ಸವರುತ್ತಾ ಸ್ವಲ್ಪ ಸಮಯ ಕಳೆದರು. ಈ ವೀಡಿಯೊದಲ್ಲಿ, ಪ್ರಧಾನಿ ತಮ್ಮ ನಿವಾಸದಲ್ಲಿ ಹಸುಗಳೊಂದಿಗೆ ಸಮಯ ಕಳೆಯುವ ದೃಶ್ಯಗಳನ್ನು ನೋಡಬಹುದು.