ಬೀದರ್ : ಪ್ರಧಾನಿ ನರೇಂದ್ರ ಮೋದಿ ಇಂದು ಬೀದರ್ ಏರ್ ಬೇಸ್ ಗೆ ಆಗಮಿಸಿದ್ದಾರೆ. ಇದೇನಿದು ಯಾವುದೇ ಪ್ರಚಾರ, ಸದ್ದಿಲ್ಲದೇ ಮೋದಿ ರಾಜ್ಯಕ್ಕೆ ಬಂದರಾ ಎಂದು ಯೋಚಿಸುತ್ತಿದ್ದೀರಾ..?ಹೌದು. ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಬೀದರ್ ಏರ್ಪೋರ್ಟ್ ಮೂಲಕ ತೆಲಂಗಾಣದ ನಿಜಾಮಾಬಾದ್ ಗೆ ತೆರಳಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ ಗೆ ಆಗಮಿಸಿದ ಮೋದಿ ಅವರಿಗೆ ಸ್ಥಳೀಯ ಬಿಜೆಪಿ ಮುಖಂಡರು ಹೂಗುಚ್ಛ ನೀಡಿ ಸ್ವಾಗತಿಸಿದರು. ಕೇಂದ್ರ ಸಚಿವ ಭಗವಂತ್ ಖೂಬಾ, ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಚಿವ ಪ್ರಭು ಚವ್ಹಾಣ್ ಮತ್ತತರಿದ್ದರು.
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಬೀದರ್ ನಗರದಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿತ್ತು . ಅಲ್ಲದೇ ಬೀದರ್ ನಲ್ಲಿ ಡ್ರೋನ್ ಹಾರಾಟ ಕೂಡ ನಿಷೇಧ ಮಾಡಿತ್ತು.