ಆಗ್ರಾ: ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಕಾಲೇಜು ಪ್ರೊಫೆಸರ್ ಮೇಲೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಆಗ್ರಾದ ತಾಜ್‌ಗಂಜ್ ಪ್ರದೇಶದ ನಗರ್ ನಿಗಮ್ ಇಂಟರ್ ಕಾಲೇಜಿನಲ್ಲಿ ನಡೆಯುತ್ತಿರುವ ಪರೀಕ್ಷೆಯ ಸಮಯದಲ್ಲಿ ಘಟನೆ ನಡೆದಿದೆ.
ಎತ್ಮಾದ್‌ಪುರ ಬ್ಲಾಕ್‌ನ ಪ್ರಾಥಮಿಕ ಶಾಲೆಯ ಭಾವಾಯಿಯ ಪ್ರಾಥಮಿಕ ಶಿಕ್ಷಕಿ ಅಲ್ಕಾ ಉಪಾಧ್ಯಾಯ ಉಪನ್ಯಾಸಕರನ್ನು ಥಳಿಸಿದ್ದಾರೆ. ತಮ್ಮ ಸಹೋದ್ಯೋಗಿಯ ಮೇಲೆ ಏಕಾಏಕಿ ಬಂದು ಹಲ್ಲೆ ನಡೆಸಿದ್ದರಿಂದ ಗಾಬರಿಗೊಂಡ ಕಾಲೇಜು ಪ್ರಾಂಶುಪಾಲರು ಸೇರಿದಂತೆ ಪ್ರಾಧ್ಯಾಪಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ರೂ ಅವರಿಗೂ ಹೊಡೆತ ಬಿದ್ದಿದೆ. ಶಿಕ್ಷಕಿ ಸಿಟ್ಟಿಗೆದ್ದು ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶಿಕ್ಷಕಿಯ ಪತಿ ಸೇರಿದಂತೆ ಹಲವಾರು ಮಂದಿ ಶಾಲೆಯ ಮುಂಭಾಗ ಜಮಾಯಿಸಿದ್ದರು. ಹೀಗಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.
ಜುಲೈ 3 ರಂದು ಪರೀಕ್ಷಾ ಪತ್ರಿಕೆಗಳನ್ನು ತೆರೆಯುತ್ತಿದ್ದಂತೆಯೇ ಅಲ್ಕಾ ಕರ್ತವ್ಯಕ್ಕೆ ತಡವಾಗಿ ಬಂದರು. ಆಕೆಯ ಆಗಮನದ ನಂತರ, ಅವರು ಬೆಳಿಗ್ಗೆ ಕರ್ತವ್ಯವನ್ನು ನಿಯೋಜಿಸುವುದರ ವಿರುದ್ಧ ಪ್ರತಿಭಟಿಸಲು ಪ್ರಾರಂಭಿಸಿದರು. ಪತಿ ಸೇರಿದಂತೆ ಮೂರ್ನಾಲ್ಕು ವ್ಯಕ್ತಿಗಳ ಜೊತೆಯಲ್ಲಿ ಬಂದ ಆಕೆ ಪ್ರಾಂಶುಪಾಲರ ಕೋಣೆಗೆ ಪ್ರವೇಶಿಸಿದರು.
ವಿಶೇಷ ಕೊಠಡಿಯಲ್ಲಿ ತನ್ನನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ಪ್ರಿನ್ಸಿಪಾಲ್ ಮೇಲೆ ಒತ್ತಡ ಹೇರಿದ್ದಾಳೆ. ಆದರೆ, ಅಲ್ಲಿದ್ದ ಸಿಬ್ಬಂದಿಗಳು ಆಕೆಯ ಮನವಿಯನ್ನು ನಿರಾಕರಿಸಿದ್ರು. ಪರೀಕ್ಷಾ ಸಮಯದಲ್ಲಿ ಹೊರಗಿನವರಿಗೆ ಅನುಮತಿ ಇಲ್ಲ ಎಂದು ಹೇಳಿದ್ರು. ಇದು ಶಿಕ್ಷಕಿಗೆ ಕೋಪವನ್ನುಂಟು ಮಾಡಿತು. ಅಲ್ಕಾ ಪತಿಯು ಎಸ್‌ಡಿಎಂ ಜೊತೆಗಿನ ಸಂಬಂಧವನ್ನು ಉಲ್ಲೇಖಿಸಿ ಸಿಬ್ಬಂದಿಗೆ ಬೆದರಿಕೆ ಹಾಕಿದರು. ಕಾಲರ್ ಹಿಡಿದು ಶಿಕ್ಷಕರೊಬ್ಬರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದು ನಿಯಂತ್ರಿಸಬೇಕಾಯಿತು. ಘಟನೆಯ ನಂತರ, ಎರಡೂ ಕಡೆಯವರನ್ನು ಠಾಣೆಗೆ ಕರೆಸಿ, ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಯಿತು.