ಬೆಂಗಳೂರು: ಹಿಂದೂ ಧಾರ್ಮಿಕ, ಧರ್ಮಾದಾಯ ದತ್ತಿಗಳ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಅರ್ಚಕರು, ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಎರಡು ಲಕ್ಷ ರೂ. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.
65 ವರ್ಷಕ್ಕೆ ನಿವೃತ್ತರಾಗುವ ದೇವಸ್ಥಾನಗಳ ನೌಕರರು, ಅರ್ಚಕರಿಗೆ ಎರಡು ಲಕ್ಷ ರೂ. ಇಡುಗಂಟು ನೀಡಲು ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ 40 ರಿಂದ 45 ಸಾವಿರ ಅರ್ಚಕರಿದ್ದಾರೆ. 3000 ಅರ್ಚಕರು ಮತ್ತು ಸಿಬ್ಬಂದಿ ನೇಮಕವಾದವರಿದ್ದಾರೆ. ಉಳಿದವರು ಆನುವಂಶಿಕವಾಗಿ ವೃತ್ತಿ ಮಾಡಿಕೊಂಡು ಬರುತ್ತಿದ್ದಾರೆ.
ಅರ್ಚಕರು ಮೃತಪಟ್ಟ ಸಂದರ್ಭದಲ್ಲಿ ಯಾವುದೇ ಪರಿಹಾರ ನೀಡುತ್ತಿರಲಿಲ್ಲ. ಇನ್ನು ಯಾರೇ ಅರ್ಚಕರು ಮೃತಪಟ್ಟರೂ 2 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದಾರೆ.