alex Certify ಮಗಳು ಹುಟ್ಟುವ ಮುನ್ನ ಅಪ್ಪನ ಕಳೆದುಕೊಂಡ ಪತಿಗೆ ಭಾವಪೂರ್ಣ ಉಡುಗೊರೆ ಕೊಟ್ಟ ಮಡದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳು ಹುಟ್ಟುವ ಮುನ್ನ ಅಪ್ಪನ ಕಳೆದುಕೊಂಡ ಪತಿಗೆ ಭಾವಪೂರ್ಣ ಉಡುಗೊರೆ ಕೊಟ್ಟ ಮಡದಿ

ಪೋಷಕರನ್ನು ಕಳೆದುಕೊಂಡ ವಿಚಾರ ಜೀರ್ಣಿಸಿಕೊಳ್ಳುವುದು ಎಂದಿಗೂ ಸುಲಭವಲ್ಲ. ಅದರಲ್ಲೂ, ಒಬ್ಬರ ಜೀವನದಲ್ಲಿ ಪ್ರಮುಖ ಮೈಲಿಗಲ್ಲೊಂದಕ್ಕೆ ಸಾಕ್ಷಿಯಾಗಬೇಕಾದ ಕೆಲವೇ ದಿನಗಳಲ್ಲಿ ಹೆತ್ತವರು ಮೃತಪಟ್ಟರಂತೂ ಹೇಳಿಕೊಳ್ಳಲಾಗದಷ್ಟು ಬೇಜಾರಾಗುತ್ತದೆ.

ಆಂಡ್ರ‍್ಯೂ ಹಾಗೂ ಅಲೆಕ್ಸೆಸ್ ಪ್ರುಯೆ ದಂಪತಿಗೂ ಸಹ ಇದೇ ಅನುಭವವಾಗಿದೆ. ಆದರೆ ಆಂಡ್ರ‍್ಯೂ ತಂದೆಯಾದ ಕೆಲ ದಿನಗಳ ಹಿಂದೆ, ಆತ ತನ್ನ ಸ್ವಂತ ತಂದೆಯನ್ನು ಕಳೆದುಕೊಂಡಿದ್ದರು. ಇದೀಗ ಆತನ ಹುಟ್ಟುಹಬ್ಬದಂದು ಆಂಡ್ರ‍್ಯೂಗೆ ಎಂದೂ ಮರೆಯಲಾಗದ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ; ತಮ್ಮ ಮಗಳು ಇಂಡಿಯಾ ಮತ್ತು ಆಕೆಯ ಅಜ್ಜನ ತಾವೇ ರಚಿಸಿದ ಸುಂದರ ಚಿತ್ರ.

ಪ್ರತಿಭಾವಂತ ಮಕ್ಕಳಿಗೆ ’ಹಂದಿ ಮರಿ’ ಉಡುಗೊರೆ ನೀಡಿದ ಶಾಲೆ

ಚಿತ್ರವನ್ನು ಆಂಡ್ರ‍್ಯೂ ತೆರೆದು ನೋಡುವ ದೃಶ್ಯವನ್ನು ಅಲೆಕ್ಸಿಸ್ ಇನ್‌ಸ್ಟಾಗ್ರಾಂ ಮತ್ತು ಟಿಕ್‌ಟಾಕ್‌ನಲ್ಲಿರುವ ತನ್ನ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಭಾವಪೂರ್ಣ ಉಡುಗೊರೆಯನ್ನು ತೆರೆದು ನೋಡುತ್ತಲೇ ಭಾವುಕರಾದ ಆಂಡ್ರ‍್ಯೂರನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

https://youtu.be/rSbwmweHP5A

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...