ಬೆಂಗಳೂರು: ಮಳೆಯಿಂದಾಗಿ ಏರುಗತಿಯಲ್ಲಿ ಸಾಗಿದ್ದ ಈರುಳ್ಳಿ ದರ ಸಗಟು ಮಾರುಕಟ್ಟೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗರಿಷ್ಠ ಕೆಜಿಗೆ 45 ರೂ. ನಂತೆ ಮಾರಾಟವಾಗುತ್ತಿದೆ.
ಟೊಮೆಟೊ ದರ ಏರಿಕೆಯಾಗಿದ್ದು, ಇದರೊಂದಿಗೆ ಈರುಳ್ಳಿ ದರ ಕೂಡ ಏರಿಕೆ ಹಾದಿಯಲ್ಲಿತ್ತು. ಎರಡು ದಿನಗಳಿಂದ ಈರುಳ್ಳಿ ದರ ಕಡಿಮೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದೆರಡು ದಿನಗಳಲ್ಲಿ ದರ ಇಳಿಕೆಯಾಗುವ ಸಾಧ್ಯತೆ ಇದೆ.
ಕಳೆದ ವಾರ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಕ್ವಿಂಟಲ್ ಗೆ 3600 – 3800 ರೂ. ವರೆಗೆ ತಲುಪಿತ್ತು. ಸೋಮವಾರ 3200 -3400 ರೂ.ಗೆ ವ್ಯಾಪಾರವಾಗಿದ್ದು, ಉಳಿದಂತೆ ಕ್ವಿಂಟಲ್ ಗೆ ಕನಿಷ್ಠ 1,500 ರೂ. ನಿಂದ ಗರಿಷ್ಠ 3200 ರೂ. ವರೆಗೆ ಮಾರಾಟವಾಗಿದೆ.
ಯಶವಂತಪುರ, ದಾಸನಪುರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಂದಿದೆ. ಹೀಗಾಗಿ ದರ ಒಂದೆರಡು ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.