ಹುಬ್ಬಳ್ಳಿ: ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಕಳೆದ ಎರಡು ತಿಂಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಬೆಳ್ಳುಳ್ಳಿ ಕ್ವಿಂಟಲ್ ಗೆ 40,000 ರೂ. ಗಡಿ ತಲುಪಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಜವಾರಿ ಬೆಳ್ಳುಳ್ಳಿ ದರ ಕೆಜಿಗೆ 450 ರೂ. ಗೆ ಮಾರಾಟವಾಗಿ ದಾಖಲೆ ಬರೆದಿದೆ. ಹೈಬ್ರೀಡ್ ಬೆಳ್ಳುಳ್ಳಿ ಮೂರು ತಿಂಗಳ ಹಿಂದೆ 100 ರೂಪಾಯಿಗೆ ಎರಡು ಕೆಜಿಯಂತೆ ಮಾರಾಟವಾಗುತ್ತಿತ್ತು. ಈಗ ಹೈಬ್ರಿಡ್ ಬೆಳ್ಳುಳ್ಳಿ ದರ ಕೂಡ ಹೆಚ್ಚಳವಾಗಿದ್ದು, ಕೆಜಿಗೆ 300 ಮಾರಾಟವಾಗಿ ದಾಖಲೆ ಬರೆದಿದೆ. ಈ ಬಾರಿ ಉತ್ಪಾದನೆ ಕುಸಿತವಾಗಿ ಬೇಡಿಕೆ ಹೆಚ್ಚಿರುವುದೇ ದರ ಹೆಚ್ಚಳಕ್ಕೆ ಕಾರಣವಾಗಿದೆ. ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.