ಹರೀಶ್ ರಾಜ್ ನಟಿಸಿ ನಿರ್ದೇಶಿಸಿರುವ ‘ಪ್ರೇತ’ ಎಂಬ ಹಾರರ್ ಚಿತ್ರ ಇದೇ ಫೆಬ್ರವರಿ 23 ರಂದು ರಾಜ್ಯದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಈ ವರ್ಷ ಬಿಡುಗಡೆಯಾಗುತ್ತಿರುವ ಮೊದಲ ಹಾರರ್ ಸಿನಿಮಾ ಇದಾಗಿದ್ದು, ಹರೀಶ್ ರಾಜ್ ಅವರೇ ತಮ್ಮ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದಲ್ಲಿ ಹರೀಶ್ ರಾಜ್ ಮತ್ತು ಐರಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದು, ಅಮೂಲ್ಯ ಭಾರದ್ವಾಜ್, ಅಮಿತ್, ವೆಂಕಟೇಶ್, ಪುರುಷೋತ್ತಮ್, ತಿಲಕ್, ನರವಂದ ಉಮೇಶ್, ಸೇರಿದಂತೆ ಹಲವರ ತಾರಾ ಬಳಗವಿದೆ. ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ ಸಂಯೋಜನೆ ನೀಡಿದ್ದು, ಜೀವನ್ ಪ್ರಕಾಶ್ ಸಂಕಲನ, ಶಿವಶಂಕರ್ ಛಾಯಾಗ್ರಹಣ, ಮತ್ತು ಕಿರಣ್ ಆರ್ ಹೆಮ್ಮಿಗೆ ಡೈಲಾಗ್ ಬರೆದಿದ್ದಾರೆ.