ಬಿಹಾರದ ಬಕ್ಸರ್‌ನಿಂದ 12 ವರ್ಷಗಳ ಹಿಂದೆ ಕಾಣೆಯಾದ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪಾಕಿಸ್ತಾನದ ಜೈಲಿನಲ್ಲಿ ಜೀವಂತವಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಖಿಲಾಫತಾಪುರದ ಚ್ಛಾವಿ ಹೆಸರಿನ ಈ ವ್ಯಕ್ತಿ 18 ವರ್ಷದ ಹುಡುಗನಾಗಿದ್ದ ವೇಳೆ ಕಾಣೆಯಾಗಿದ್ದರು. ಕುಟುಂಬದ ಸದಸ್ಯರು ಹೇಳುವ ಪ್ರಕಾರ ಚ್ಚಾವಿ ಮಾನಸಿಕ ಅಸ್ವಸ್ಥರಾಗಿದ್ದರು.
ಬಹಳಷ್ಟು ಹುಡುಕಾಡಿದ ಬಳಿಕ ಚ್ಛಾವಿ ಕಾಣೆಯಾಗಿರುವುದಾಗಿ ಆತನ ಕುಟುಂಬ ಪೊಲೀಸರಿಗೆ ದೂರು ಕೊಟ್ಟಿತ್ತು. ಎರಡು ವರ್ಷಗಳ ಬಳಿಕವೂ ಚ್ಚಾವಿ ಸುಳಿವೇ ಸಿಗದಿದ್ದಾಗ ಆತನ ಕುಟುಂಬ ಆತ ಮೃತಪಟ್ಟಿದ್ದಾರೆ ಎಂದು ಭಾವಿಸಿ ಅಂತ್ಯಕ್ರಿಯೆಗಳನ್ನೂ ನೆರವೇರಿಸಿಬಿಟ್ಟಿತ್ತು.
ಬಾಲಿವುಡ್ಗೂ ವಂಚಕ ಸುಕೇಶ್ಗೂ ಇದ್ದ ಲಿಂಕ್ ಏನು…..? ಈತನ ಮೋಸದ ಜಾಲಕ್ಕೆ ಜಾಕ್ವೆಲಿನ್ ಬಿದ್ದಿದ್ದೇಗೆ…..? ಇಲ್ಲಿದೆ ಡಿಟೇಲ್ಸ್
ಖಿಲಾಫತಾಪುರದ ಚ್ಚಾವಿ ಎಂಬ ಹೆಸರಿನ ನಿವಾಸಿಯೊಬ್ಬರು ಪಾಕಿಸ್ತಾನದ ಜೈಲೊಂದರಲ್ಲಿ ಬಂಧಿಯಾಗಿದ್ದಾರೆ ಎಂಬ ಪತ್ರವೊಂದು ತಮಗೆ ಬಂದಿರುವುದಾಗಿ ಇಲ್ಲಿನ ಪೊಲೀಸರು ಚ್ಛಾವಿ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ. ಚ್ಛಾವಿ ಜೀವಂತ ಇರುವ ಸುದ್ದಿ ಕೇಳಿದ ಆತನ ಕುಟುಂಬಸ್ಥರು ಆತ ಸುರಕ್ಷಿತವಾಗಿ ಮನೆಗೆ ಮರಳಲು ಪ್ರಾರ್ಥಿಸುತ್ತಿದ್ದಾರೆ.
ಪಾಕಿಸ್ತಾನದ ಯಾವ ಜೈಲಿನಲ್ಲಿ ಚ್ಚಾವಿ ಇದ್ದಾರೆ ಎಂದು ಸ್ಪಷ್ಟವಾಗಿ ಪತ್ರದಲ್ಲಿ ತಿಳಿಸಿಲ್ಲ. ಸಾಧ್ಯವಾದಷ್ಟು ಬೇಗ ವಿದೇಶೀ ಜೈಲಿನಿಂದ ಚ್ಚಾವಿ ಬಿಡುಗಡೆ ಮಾಡಬೇಕೆಂದು ಕೋರಿ ಪೊಲೀಸರು ವರದಿ ಫೈಲ್ ಮಾಡಿದ್ದಾರೆ.
ಚ್ಚಾವಿ ನಾಪತ್ತೆಯಾದಾಗಿನಿಂದ ಆತನ ತಂದೆ ಮೃತಪಟ್ಟಿದ್ದು, ಆತನ ತಾಯಿ, ಸಹೋದರ ಹಾಗೂ ನಾದಿನಿ ಪೊಲೀಸರ ಬಳಿ ಇರುವ ಆತನ ಗುರುತನ್ನು ಖಾತ್ರಿಪಡಿಸಿದ್ದು, ಆತ ಸುರಕ್ಷಿತವಾಗಿ ಮನೆಗೆ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.