ಮೊಡವೆಗಳಿಗೆ ಧೂಳು, ಕೊಳೆ, ಹಾರ್ಮೂನ್ ಗಳು ಹೇಗೆ ಕಾರಣವಾಗುತ್ತವೆಯೋ ಅದೇ ರೀತಿ ನಿಮ್ಮ ಮಾನಸಿಕ ಒತ್ತಡವೂ ಕಾರಣವಾಗಬಹುದು. ಅಂದರೆ ನೀವು ಹೆಚ್ಚು ಮಾನಸಿಕ ಒತ್ತಡ ಅನುಭವಿಸುವ ದಿನಗಳಲ್ಲಿ ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡಾವು. ಇದಕ್ಕೆ ಕಾರಣವೇನು ಗೊತ್ತೇ?
ಒತ್ತಡ ಹೆಚ್ಚಿದಂತೆ ನಮ್ಮ ದೇಹದಿಂದ ಸ್ರವಿಸುವ ಹಾರ್ಮೋನ್ ಒಂದು ತ್ವಚೆಯ ಕೆಳಭಾಗದಲ್ಲಿ ಹೆಚ್ಚು ಎಣ್ಣೆಯಂಶ ಉತ್ಪತ್ತಿಯಾಗುವಂತೆ ಮಾಡುತ್ತದೆ. ಆಗ ಸೂಕ್ಷ್ಮರಂಧ್ರಗಳು ತುಂಬಿ ಬ್ಯಾಕ್ಟೀರಿಯಾದ ತವರಾಗಿ ಮೊಡವೆ ಹುಟ್ಟಲು ಮುಖ್ಯ ಕಾರಣವಾಗುತ್ತದೆ.
ಹೀಗೆ ಮೂಡುವ ಮೊಡವೆಗಳು ದೊಡ್ಡದಾಗಿ ಕೀವು ತುಂಬಿಕೊಳ್ಳದಿದ್ದರೂ ಸಣ್ಣದಾಗಿ ಮುಖದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಹಣೆ, ಕೆನ್ನೆಯ ಮೇಲೆಲ್ಲಾ ಮೂಡಿ ಕಿರಿಕಿರಿ ಉಂಟು ಮಾಡುತ್ತವೆ.
ಇದಕ್ಕೆ ಪರಿಹಾರವೆಂದರೆ ಒತ್ತಡದಿಂದ ಸಾಧ್ಯವಾದಷ್ಟು ದೂರವಿರುವುದು. ದಿನಕ್ಕೆ ಎಂಟು ಗಂಟೆಯ ನಿದ್ದೆಯನ್ನು ತಪ್ಪಿಸದಿರುವುದು, ಧ್ಯಾನ ಮಾಡುವುದು, ಟೆನ್ಷನ್ ಮಾಡುವ ಸಂಗತಿಗಳಿಂದ ದೂರವಿರುವುದು, ಅಥವಾ ಅದನ್ನು ಪರಿಹರಿಸಿಕೊಳ್ಳುವುದು. ಒತ್ತಡವನ್ನು ನಿಯಂತ್ರಿಸುವ ಬಗೆ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯದಿರಿ.