ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ 110 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. 10 ರಾಜ್ಯಗಳಿಗೆ ಸೇರಿದ 110 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ.
ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಪರವಾಗಿ ಶಾಸಕರಿಂದ ಅಡ್ಡ ಮತದಾನ ನಡೆದಿದೆ. ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು 120 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. 17 ಸಂಸದರಿಂದಲೂ ಅಡ್ಡ ಮತದಾನ ನಡೆದಿದೆ.
ಅತಿ ಹೆಚ್ಚು ಅಡ್ಡ ಮತದಾನವಾದ ರಾಜ್ಯಗಳು
ಅಸ್ಸಾಂ: 22
ಮಧ್ಯಪ್ರದೇಶ: 19
ಮಹಾರಾಷ್ಟ್ರ: 16
ಉತ್ತರ ಪ್ರದೇಶ: 12
ಗುಜರಾತ್: 10
ಜಾರ್ಖಂಡ್: 10
ಬಿಹಾರ: 6
ಛತ್ತೀಸ್‌ಗಢ: 6
ರಾಜಸ್ಥಾನ 5
ಗೋವಾ 4
ಭಾರತದ ಮೊದಲ ಬುಡಕಟ್ಟು ಮತ್ತು ಕಿರಿಯ ಅಧ್ಯಕ್ಷರಾಗಿರುವ ಮುರ್ಮು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಅಸೆಂಬ್ಲಿಗಳಿಂದ ಗರಿಷ್ಠ ಮತಗಳನ್ನು ಪಡೆದರೆ, ಸಿನ್ಹಾ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಿಂದ ಹೆಚ್ಚಿನ ಬೆಂಬಲವನ್ನು ಪಡೆದರು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿರೋಧ ಪಕ್ಷದ ಶಾಸಕರ ಅಡ್ಡ ಮತದಾನದ ಬಗ್ಗೆ ತಿಳಿಸಿ 126 ಸದಸ್ಯ ಅಸ್ಸಾಂ ವಿಧಾನಸಭೆಯಲ್ಲಿ ಎನ್.ಡಿ.ಎ. 79 ಮತ ಹೊಂದಿದ್ದು, ದ್ರೌಪದಿ ಮುರ್ಮು 104 ಮತಗಳನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ.