ನವದೆಹಲಿ : ದೆಹಲಿಯ ಕರ್ತವ್ಯ ಪಥದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಭಾಗಿಯಾದರು.
ಇದಕ್ಕೂ ಮುನ್ನ ದೆಹಲಿ ಪೊಲೀಸರು ಸಮಾರಂಭಕ್ಕಾಗಿ ವ್ಯಾಪಕ ಸಂಚಾರ ವ್ಯವಸ್ಥೆ ಮಾಡಿದ್ದರು. ಬೀಟಿಂಗ್ ರಿಟ್ರೀಟ್ ಸಮಾರಂಭವು ಗಣರಾಜ್ಯೋತ್ಸವ ಆಚರಣೆಯ ಔಪಚಾರಿಕ ಅಂತ್ಯವನ್ನು ಸೂಚಿಸುತ್ತದೆ.
ಈ ಹಿನ್ನೆಲೆ ಸೋಮವಾರ ಮಧ್ಯಾಹ್ನ 2 ರಿಂದ ರಾತ್ರಿ 9.30 ರವರೆಗೆ ವಿಜಯ್ ಚೌಕ್ ನಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಸುನೆಹ್ರಿ ಮಸೀದಿ ವೃತ್ತ ಮತ್ತು ಕೃಷಿ ಭವನ ವೃತ್ತದ ನಡುವಿನ ರಫಿ ಮಾರ್ಗದಲ್ಲಿ, ಕೃಷಿ ಭವನ ವೃತ್ತದಿಂದ ವಿಜಯ್ ಚೌಕ್ ಕಡೆಗೆ, ದಾರಾ ಶಿಕೋ ವೃತ್ತದಿಂದಾಚೆಗೆ, ಕೃಷ್ಣ ಮೆನನ್ ಮಾರ್ಗ್ ವೃತ್ತ ಮತ್ತು ಸುನೆಹ್ರಿ ಮಸೀದಿಯಿಂದ ವಿಜಯ್ ಚೌಕ್ ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಕರು ರಿಂಗ್ ರಸ್ತೆ, ರಿಡ್ಜ್ ರಸ್ತೆ, ಅರಬಿಂದೋ ಮಾರ್ಗ, ಮದ್ರಸಾ ಟಿ-ಪಾಯಿಂಟ್, ಲೋಧಿ ರಸ್ತೆ, ಸಫ್ದರ್ಜಂಗ್ ರಸ್ತೆ, ಕಮಲ್ ಅಟಾತುರ್ಕ್ ಮಾರ್ಗ, ರಾಣಿ ಝಾನ್ಸಿ ರಸ್ತೆ ಮತ್ತು ಮಿಂಟೋ ರಸ್ತೆಯಂತಹ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.